ಮಾತು ಮರೆತ ಕ್ಷಣ
ನಿನ್ನದೇ ನೆನಪು
ಅಲ್ಲೆಲ್ಲೋ ನೀನು
ಮೂಕವಾಗಿದ್ದೀ ಅಂತ
ದುಃಖ ಉಕ್ಕಿರಬೇಕು ಅಲ್ಲಿ
ನನ್ನ ಕಣ್ಣುಗಳು ಉಕ್ಕಿದವಿಲ್ಲಿ
ಹಿತ ನನಗೆ
ನಿನ್ನ ದುಃಖ ನನ್ನದಾಯಿತು ಅಂತ
ಕನಸಲ್ಲಿ ನಕ್ಕೆಯೇನೋ
ಇಲ್ಲಿ ಹೃದಯ ಹೂವಾಯಿತು
ನಿದ್ದೆಯಾಳದಲ್ಲೆಲ್ಲೋ
ನೆಮ್ಮದಿಯ ಹೊರಳು
ನಾನು ನಾನಾಗಿಲ್ಲ
ನೀನಾಗಿದ್ದೇನೆ
ನೀನು ನೀನಾಗಿಲ್ಲ
ನಾನಾಗಿದ್ದೀ
ಹೆಚ್ಚೇನ ಹೇಳಲಿ?
ಅಲ್ಲಿಯ ಕಿಚ್ಚು
ಇಲ್ಲಿ ಧಗಿಸುತ್ತದೆ
ಅಲ್ಲಿಯ ಕಣ್ಣೀರು
ಇಲ್ಲಿ ಹನಿಯುತ್ತದೆ
ಅಲ್ಲಿಯ ಖುಷಿಗೆ
ಇಲ್ಲಿ ಉಕ್ಕುತ್ತದೆ
ಅಲ್ಲಿಗೂ ಇಲ್ಲಿಗೂ
ಏನದು ನಂಟು
ಮಾಯೆಯೋ ಮಮತೆಯೋ
ಎಲ್ಲ ಮೀರಿದ
ಪ್ರೀತಿಯ ಒರತೆಯೋ
ಇದು
ಅಕ್ಷರ ಮೀರಿದ ಭಾವ
ಅರ್ಥವಾಯಿತೆ?
ಅರ್ಥವಾಗದಿದ್ದೀತೆ?
- ಚಾಮರಾಜ ಸವಡಿ
ಸಂತೆ ಕರಗಿದ ಮೇಲೆ ಸಂತನ ಆಗಮನ
-
ವರ್ಷದ ಕೊನೆಯ ದಿನ ಏನು ಮಾಡಿದಿರಿ?
ಭರ್ಜರಿ ಪಾರ್ಟಿ ಮಾಡಿದ್ದಾದರೆ, ಅದನ್ನು ಪಕ್ಕಕ್ಕಿಡಿ. ಎಸ್ಸೆಮ್ಮೆಸ್ಗಳನ್ನು ಕಳಿಸಿದ್ದು, ಫೋನ್ ಮಾಡಿ ಶುಭಾಶಯ ಕೋರಿದ್ದು, ಕೇಕ್ ಕತ್ತರಿಸಿದ್ದು, ಮೇಲ್...

5 ಪ್ರತಿಕ್ರಿಯೆ:
ಹೆಚ್ಚೇನೂ ಅರ್ಥವಾಗಲಿಲ್ಲ ಚಾಮರಾಜಗಾರು!
ಆದರೆ ಒನ್ದು ಅರ್ಥವಾಗಿದೆ, ಅದೇನೆನ್ದರೆ ಎಲ್ಲವನ್ನೂ ಮೀರಿದ ಪ್ರೀತಿಯ ಒರತೆಗೆ ಅಕ್ಷರರೂಪವನ್ನೀಯುತ್ತಿದ್ದೀರಿ.
ಚಾಮರಾಜರೇ, ಸುಂದರ ಅಭಿವ್ಯಕ್ತಿ.
ಥ್ಯಾಂಕ್ಸ್ ಕೃಷ್ಣಪ್ರಕಾಶ್. ನಿಮಗೆ ಅರ್ಥವಾಗದ್ದು ಕೇಳಿ ನಾನು ಇನ್ನೂ ಮಾಗಿಲ್ಲ ಅನಿಸಿತು :)
ಪ್ರೀತಿಯ ಒರತೆಯೇ ಹಾಗೆ. ಕ್ರಮೇಣ ಅರ್ಥವಾಗುತ್ತದೆ ಅಂದುಕೊಂಡಿದ್ದೇನೆ.
ಥ್ಯಾಂಕ್ಸ್ ನಾಗರಾಜ್ ಅವರೇ. ನಿಮಗೆ ಅಭಿವ್ಯಕ್ತಿ ಸುಂದರವಾಗಿ ಕಂಡಿದೆ. ನನಗೆ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟಕರವಾಗಿದೆ. :)
ನಿಮ್ಮ ಬರೆಹಗಳನ್ನು ಮತ್ತೂ ಓದಿದ ನಂತರ ಅರ್ಥವಾಗುತ್ತಿದೆ ಚಾಮರಾಜಗಾರು. ಮನಸ್ಸಿಗೆ ತಟ್ಟುವಂತೆ ಬರೆದಿದ್ದೀರಿ.
Post a Comment