ಏಕೆ ಇಷ್ಟವಾಗುತ್ತಾರೋ...

10 Dec 2011

ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದಾಗ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು

***
 
ಚೆಂದದ ಕವಿತೆ
ಬರೆಯಲು ಕೂತರೆ
ಪೆನ್ನು ಮಂಕಾಗುತ್ತದೆ
ಕವಿತೆ ನಗುತ್ತದೆ
 
***
 
ಒಂದೇ ಒಂದು ಕನಸಿತ್ತು
ಅದು ನನಸಾಗಲೇ ಇಲ್ಲ

ಈಗಲೂ ನನ್ನ ಬಳಿ ಉಳಿದಿದ್ದು
ಆ ಕನಸೊಂದೇ
 
***
ಇಬ್ಬರು ಮಕ್ಕಳು
ಒಂದು ಕವಿತೆ

ಅದೂ ಮಗುವೇ!
 
***
 
ಕನಸಿಗೂ ಒಂದು ಮನಸಿದೆ
ಅದು ಕೈಗೆ ಸಿಗದಂತಿದೆ
 
***
 
ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ?
ನೀನು ಕವಿಯೂ ಅಲ್ಲ, ಪ್ರೇಮಿಯೂ ಅಲ್ಲ
 
***
 
ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ!
 
***

- ಚಾಮರಾಜ ಸವಡಿ

1 comment:

ವೀರಣ್ಣ ಮಡಿವಾಳರ said...

ಸರ್, ನಾನು ನಿಮ್ಮ ಅಭಿಮಾನಿ. ಕಲಕೇರಿಯವನು. ಪಯಾ೵ಯ ದ ನಿಮ್ಮ ಚಿಂತನೆಗಳನ್ನು ತುಂಬ ಾಸಕ್ತಿಯಿಂದ ಓದುತ್ತಿದ್ದವನು ನಾನು. ಕೊಪ್ಪಳ ನನಗೆ ಸಾಂಸ್ಕ್ರತಿಕ ಜಗತ್ತನ್ನು ಪರಿಚಯಿಸಿದ ತಾಣ. ವಿಭಾ ಪುಸ್ತಕ ಬಿಡುಗಡೆಯ ದಿನ ನಿಮ್ಮನ್ನು ನೋಡಿದ್ದೆ. ಮಾತನಾಡಿಸಲಾಗಿರಲಿಲ್ಲ. ನಿಮ್ಮ ಪತ್ರಿಕಾ ಬದುಕಿನ ಸಂಘಷ೵ ನಮ್ಮಲ್ಲೂ ಕೊಂಚ ಜೀವಂತಿಕೆಯನ್ನು ಉಳಿಸಿದೆ. ನಿಮ್ಮ ಬ್ಲಾಗ್ ಸಿಕ್ಕಿದ್ದು ಖುಷಿಯಾಯಿತು.
ನೀವು ನಮಗೆ ಇಷ್ಟವಾಗಿ ಬಹಳ ಕಾಲವಾಯಿತು.
- ವೀರಣ್ಣ ಮಡಿವಾಳರ