ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದಾಗ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು
ಅಂತ ಮಲಗಿದಾಗ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು
***
ಚೆಂದದ ಕವಿತೆ
ಬರೆಯಲು ಕೂತರೆ
ಪೆನ್ನು ಮಂಕಾಗುತ್ತದೆ
ಕವಿತೆ ನಗುತ್ತದೆ
ಬರೆಯಲು ಕೂತರೆ
ಪೆನ್ನು ಮಂಕಾಗುತ್ತದೆ
ಕವಿತೆ ನಗುತ್ತದೆ
***
ಒಂದೇ ಒಂದು ಕನಸಿತ್ತು
ಅದು ನನಸಾಗಲೇ ಇಲ್ಲ
ಈಗಲೂ ನನ್ನ ಬಳಿ ಉಳಿದಿದ್ದು
ಆ ಕನಸೊಂದೇ
ಅದು ನನಸಾಗಲೇ ಇಲ್ಲ
ಈಗಲೂ ನನ್ನ ಬಳಿ ಉಳಿದಿದ್ದು
ಆ ಕನಸೊಂದೇ
***
ಇಬ್ಬರು ಮಕ್ಕಳು
ಒಂದು ಕವಿತೆ
ಅದೂ ಮಗುವೇ!
ಇಬ್ಬರು ಮಕ್ಕಳು
ಒಂದು ಕವಿತೆ
ಅದೂ ಮಗುವೇ!
***
ಕನಸಿಗೂ ಒಂದು ಮನಸಿದೆ
ಅದು ಕೈಗೆ ಸಿಗದಂತಿದೆ
ಅದು ಕೈಗೆ ಸಿಗದಂತಿದೆ
***
ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ?
ನೀನು ಕವಿಯೂ ಅಲ್ಲ, ಪ್ರೇಮಿಯೂ ಅಲ್ಲ
ನೀನು ಕವಿಯೂ ಅಲ್ಲ, ಪ್ರೇಮಿಯೂ ಅಲ್ಲ
***
ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ!
ಏಕೆ ಇಷ್ಟವಾಗುತ್ತಾರೋ!
***
- ಚಾಮರಾಜ ಸವಡಿ
- ಚಾಮರಾಜ ಸವಡಿ
1 comment:
ಸರ್, ನಾನು ನಿಮ್ಮ ಅಭಿಮಾನಿ. ಕಲಕೇರಿಯವನು. ಪಯಾಯ ದ ನಿಮ್ಮ ಚಿಂತನೆಗಳನ್ನು ತುಂಬ ಾಸಕ್ತಿಯಿಂದ ಓದುತ್ತಿದ್ದವನು ನಾನು. ಕೊಪ್ಪಳ ನನಗೆ ಸಾಂಸ್ಕ್ರತಿಕ ಜಗತ್ತನ್ನು ಪರಿಚಯಿಸಿದ ತಾಣ. ವಿಭಾ ಪುಸ್ತಕ ಬಿಡುಗಡೆಯ ದಿನ ನಿಮ್ಮನ್ನು ನೋಡಿದ್ದೆ. ಮಾತನಾಡಿಸಲಾಗಿರಲಿಲ್ಲ. ನಿಮ್ಮ ಪತ್ರಿಕಾ ಬದುಕಿನ ಸಂಘಷ ನಮ್ಮಲ್ಲೂ ಕೊಂಚ ಜೀವಂತಿಕೆಯನ್ನು ಉಳಿಸಿದೆ. ನಿಮ್ಮ ಬ್ಲಾಗ್ ಸಿಕ್ಕಿದ್ದು ಖುಷಿಯಾಯಿತು.
ನೀವು ನಮಗೆ ಇಷ್ಟವಾಗಿ ಬಹಳ ಕಾಲವಾಯಿತು.
- ವೀರಣ್ಣ ಮಡಿವಾಳರ
Post a Comment