ಸತ್ಯ ಹೇಳುವುದು ಕಷ್ಟ, ಹೇಳದಿರುವುದು ಇನ್ನೂ ಕಷ್ಟ

18 Nov 2009

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.

ತುಂಬ ಸಾರಿ ನೋಡಿದ್ದೇನೆ: ಸಾಮಾನ್ಯವಾಗಿ ದಡ್ಡರು ಉನ್ನತ ಸ್ಥಾನದಲ್ಲಿ ಕೂತಿರುತ್ತಾರೆ. ಪ್ರತಿಭಾವಂತರನ್ನು ಕಂಡರೆ ಅವರಿಗೆ ಅಸೂಯೆ, ಕೀಳರಿಮೆ. ಅದನ್ನು ಹೋಗಲಾಡಿಸಲು ಗತ್ತು ನಟಿಸುತ್ತಾರೆ. ತಮಗೆ ಎಲ್ಲದೂ ಗೊತ್ತಿದೆ ಎಂಬ ಮುಖವಾಡ ತೊಡುತ್ತಾರೆ. ಅದೇ ಹೊತ್ತಿಗೆ, ತನ್ನ ಹುಳುಕು ಯಾರಿಗಾದರೂ ಗೊತ್ತಾದರೆ ಹೇಗೆ ಎಂಬ ಅಳುಕೂ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೆಲಸ ಗೊತ್ತಿರುವವರನ್ನು ಕಂಡರೆ ಭಯ. ಅವರನ್ನು ಕಾಡಲು ಶುರು ಮಾಡುತ್ತಾರೆ. ಅವರು ಮಾಡಿದ್ದೆಲ್ಲ ತಪ್ಪು ಎನ್ನುತ್ತಾರೆ. ಬೆಳೆಯಲು ಸಾಧ್ಯವಿರುವ ಬಾಗಿಲುಗಳನ್ನೆಲ್ಲ ಮುಚ್ಚುತ್ತಾರೆ. ತಾವಿಲ್ಲದಾಗ ಬಾಗಿಲು ತೆಗೆದುಕೊಂಡು ಬಂದರೆ? ಎಂಬ ಅಳುಕಿನಿಂದಾಗಿ, ಹೊರಗೇ ಕಾವಲು ನಿಲ್ಲುತ್ತಾರೆ.

ಇದು ನಿಜಕ್ಕೂ ದುರ್ಭರ ಪರಿಸ್ಥಿತಿ. ಅವಕಾಶ ನಿರಾಕರಿಸಲ್ಪಟ್ಟ ವ್ಯಕ್ತಿಯೂ ಬೆಳೆಯುವುದಿಲ್ಲ, ಆತನ ಕಾವಲಿಗೆ ನಿಂತವನೂ ಬೆಳೆಯಲಾರ. ಇಂಥ ಪರಿಸ್ಥಿತಿ ಉಂಟಾದಾಗ, ಇಬ್ಬರು ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆ ಕೂಡ ಹಾಳಾಗುತ್ತದೆ. ಆಗ ಏನು ಮಾಡಬೇಕು?

ಮೌನವಾಗಿ ಇದ್ದುಬಿ
ಡಿ. ಗತ್ತು ತೋರಿಸುವವನಿಗೇ ಮೊದಲ ಬ್ಯಾಟಿಂಗ್ ಭಾಗ್ಯ ದಕ್ಕಲಿ. ಅವನದೇ ಮಾತು ನಡೆಯಲಿ. ತನ್ನ ಗತ್ತು ಮತ್ತು ಶಕ್ತಿ ಪ್ರದರ್ಶನದ ಅತಿರೇಕದಲ್ಲಿ ಆತನ ದೌರ್ಬಲ್ಯ ಬಲು ಬೇಗ ಬಯಲಾಗುತ್ತ ಹೋಗುತ್ತದೆ.

ನಾನು ಮೌನವಾಗಿದ್ದುಕೊಂಡು ಓದು-ಬರೆಹ ಮುಂದುವರೆಸಿಕೊಂಡು ಹೋಗುತ್ತೇನೆ. ಅದೊಂಥರಾ ವನವಾಸದ ಸುಖ. ಏನೋ ಶಾಂತಿ, ನೆಮ್ಮದಿ ತರುವ ಮೌನ. ಅಧ್ಯಯನದಲ್ಲಿ ಮುಳುಗಿದಂತೆ, ಅತ್ತ ಗತ್ತು ಯಾವತ್ತೋ ಕರಗಿರುತ್ತದೆ. ಹುಳುಕು ಹೊರಬಿದ್ದಿರುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೇ ಕಾಯಬೇಕಾಗಬಹುದು.

ಅಷ್ಟೊಂದು ಸಮಾಧಾನ/ಅನಿವಾರ್ಯತೆ ನನಗಿದ್ದರೆ ಕಾಯುತ್ತೇನೆ. ಇಲ್ಲದಿದ್ದರೆ, ಎದ್ದು ಹೋಗುತ್ತೇನೆ.

ಏಕೆಂದರೆ, ಬದುಕಿನಲ್ಲಿ ಮುಚ್ಚಿದ ಬಾಗಿಲುಗಳಿಗಿಂತ ತೆರೆದ ಬಾಗಿಲುಗಳೇ ಹೆಚ್ಚು. ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವವೂ ಹೌದು.

- ಚಾಮರಾಜ ಸವಡಿ

6 comments:

Unknown said...

ಸವಡಿ ಸರ್
ಚಿಂತನೆಗೆ ಹಚ್ಚುವಂತಿದೆ ನಿಮ್ಮ ಈ ಲೇಖನ.
ತಮ್ಮ ಹುಳುಕು ಮುಚ್ಚಿಟ್ಟುಕೊಳ್ಳಲು ಕಾವಲು ಕಾಯುವ ಕೆಲಸ ಮಾಡುವ ಒಂದಿಬ್ಬರನ್ನು ನಾನೂ ಹತ್ತಿರದಿಂದ ಕಂಡಿದ್ದೇನೆ. ಅವರ ಬಗ್ಗೆ ಹೀಗೇ ಎಂದು ಯೋಚಿಸಲು ಸಾಧ್ಯವಾಗಿಯೇ ಇರಲಿಲ್ಲ. ಈ ನಿಟ್ಟಿನಲ್ಲಿ ನಿಮ್ಮ ಲೇಖನ ನನ್ನ ಆಲೋಚನಾ ಕ್ರಮವನ್ನು ಬದಲಾಯಿಸಿಬಿಟ್ಟಿದೆ. ಧನ್ಯವಾದಗಳು

ಚಕೋರ said...

ಚಾಮರಾಜ ಸವಡಿ,

ಸತ್ಯದ ಕುರಿತು ಸತ್ಯವಾದ ಮಾತು.

ಬೇರೆಡೆ ಬಿಡಿ. ಬ್ಲಾಗು ಲೋಕದಲ್ಲಿ ಕೂಡ ಸತ್ಯವಾಗಿ ಕಾಮೆಂಟ್ ಮಾಡಿದರೂ ಅದೇ ಗತಿ. ಹೊಗಳಿದವರಿಗೆ ಮಾತ್ರ ಮಣೆ. ನಾನು ಮಾತ್ರ ನನ್ನ ಅನಿಸಿಕೆಯನ್ನ ನಿರ್ಭಿಡೆಯಿಂದ ಕಾಮೆಂಟಿಸುತ್ತಿದ್ದು (ಅನಾಮಿಕನಾಗಿದ್ದರಿಂದ ಮಾತ್ರ ಸಾಧ್ಯವಾಯ್ತಾ?) ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದೇನೆ.

ಆದರೂ ಸರಿ. ನನಗನ್ನಿಸಿದ್ದನ್ನು ನೇರವಾಗಿ ಹೇಳುವುದನು ಮುಂದುವರಿಸುತ್ತೇನೆ.

Chamaraj Savadi said...

ಥ್ಯಾಂಕ್ಸ್‌ ಸತ್ಯನಾರಾಯಣ ಸರ್‌. ಎಷ್ಟು ದಿನಾಂತ ಮನಸ್ಸಿನ ಮಾತುಗಳನ್ನು ಮುಚ್ಚಿಕೊಂಡು ಬದುಕೋದು ಹೇಳಿ. ಕಡೇ ಪಕ್ಷ ಕೆಲವೊಂದು ವಿಷಯಗಳಲ್ಲಿಯಾದರೂ ನಮಗನಿಸಿದ್ದನ್ನು ಹೇಳಲು ಯತ್ನಿಸಬೇಕಲ್ವೆ? ಹೀಗಾಗಿ, ಈ ಬರಹ.

Chamaraj Savadi said...

ಥ್ಯಾಂಕ್ಸ್‌ ಚಕೋರ. ಅನಾಮಿಕರಾಗಿ ಇದ್ದು ಸತ್ಯ ಹೇಳಬೇಕೆಂದೇನಿಲ್ಲ. ಮುಕ್ತವಾಗಿ ಕೂಡ ಹೇಳಬಹುದು. ನಿಮ್ಮ ಸಾಹಿತ್ಯಿಕ ಉದ್ದೇಶಗಳಿಗಾಗಿ ಅನಾಮಿಕರಾಗಿದ್ದರೆ ಸರಿ, ಇಲ್ಲದಿದ್ದರೆ ನೇರವಾಗಿ ಹೇಳಿ. ಅಳುಕುವುದೇಕೆ?

shashi said...

Chamraj Sir,
I am regular reader of your articles, and your articles about Gouri, really heart touching.
The rason why i am writing this is just a month before i visited my sister's family friend, there i find the symtoms in a 6year boy. i was there for 2 hours and i felt very sad on the situation of that kid, during that time the first thing came in my mind is Gouri, i was really upset. and today when i read your article in sampada, i thought may be your experience may help for getting that may be to a good doctor.
Please suggest since the boy is from poor family.

Please mail me if any suggestions on SHASHIBIRGE(AT)GMAIL(DOT)COM. AND PROVIDE ME YOUR CONTACT NUMBER

Chamaraj Savadi said...

Dear Shashi,

I am moved by your mail. Thanks for sharing and showing your concern about dear Gowri.

Right now, Gowri is admitted in a special school at Chandra Layout (MB Psycho Education School, C/o Dr. Meena Jain, 1366/C, 4th Cross), Bangalore-40. She is doing fine. School and the teachers are good and dedicated.

As far as my experience goes, there is no medical treatment for such symptoms. Only interaction and in certain cases, physiotherapy can help. I have tried so many medical options on Gowri, but none of them yielded any result.

Your sister's frined's son can be brought to Dr. Meena Jain's school. You can contact the school over phone (080) 2339 1901. My phone number is 94810 27224.

Hope, your sister's friend's son will get a supporting and caring atmosphere. My sincere wishes on the kid and parents.