ಹಾಡಿನ ಮೋಡಿಯಲ್ಲಿ ನಾಡನ್ನೆಲ್ಲ ಸಿಲುಕಿಸಿದ್ದ ಸುಗಮ ಸಂಗೀತದ ದಿಗ್ಗಜ ಸಿ. ಅಶ್ವಥ್ ಮೃತರಾಗಿದ್ದಾರೆಯೆ?
ಮಾಧ್ಯಮ ವಲಯದಲ್ಲಿ ಇಂಥದೊಂದು ಸುದ್ದಿ ಇವತ್ತು ತೀವ್ರವಾಗಿ ಕೇಳಿಬರತೊಡಗಿದೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಥ್ ಅವರನ್ನು ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಮೂರು ದಿನಗಳ ಹಿಂದೆಯೇ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು ಎಂಬ ವದಂತಿ ಇದೆ.
ಆದರೆ, ಮಂಗಳವಾರ ಅವರ ೭೦ನೇ ಜನ್ಮದಿನದ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ಏರ್ಪಾಟಾಗಿರುವುದರಿಂದ, ಕೊಮಾದಲ್ಲಿದ್ದ ಗಾಯಕನ ದೇಹಸ್ಥಿತಿಯ ಬಗ್ಗೆ ಮಾಹಿತಿ ನೀಡುವುದು ಬೇಡ ಎಂದು ಸಂಬಂಧಿಸಿದವರು ನಿರ್ಧರಿಸಿದ್ದಾಗಿ ಕೇಳಿಬರುತ್ತಿದೆ. ಈ ಕುರಿತು ಮಾಧ್ಯಮ ಮಿತ್ರರಲ್ಲೇ ತೀವ್ರ ಭಿನ್ನಾಭಿಪ್ರಾಯವೂ ಇದೆ. ಹಲವಾರು ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಹಿರಿಯರು, ಈ ಸುದ್ದಿಯನ್ನು ಅಧಿಕೃತ ಪ್ರಕಟಣೆ ಬರುವವರೆಗೆ ಪ್ರಸಾರ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದಾಗಿಯೂ ಹೇಳಲಾಗಿದೆ.
ಈ ಎಲ್ಲ ವದಂತಿಗಳು ಸುಳ್ಳಾಗಲಿ. ಅಶ್ವಥ್ ಮತ್ತೆ ’ರೇ ರೇ ರೇ ರಾ...’ ಎಂದು ಹಾಡುತ್ತ ಆಸ್ಪತ್ರೆಯಿಂದ ಎದ್ದು ಬರಲಿ ಅಂತ ಹಾರೈಸುವೆ.
- ಚಾಮರಾಜ ಸವಡಿ
(ಚಿತ್ರ ಕೃಪೆ: http://www.kamat.org)
Subscribe to:
Post Comments (Atom)
No comments:
Post a Comment