ಬುದ್ಧಿವಂತನಲ್ಲಿ
ಭಾವನೆಗಳ ಪಸೆಯಿಲ್ಲ
ತಲೆ ಏರಿ ಕೂತರೆ
ಹೃದಯಕ್ಕೆ ಇಳಿಯುವುದೇ ಇಲ್ಲ
*****
ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದರೆ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು
*****
ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ...
*****
ಹುಚ್ಚನಂತೆ ಬದುಕುತ್ತಿದ್ದಾಗ
ಜೀವನವೆಷ್ಟು ಚಂದವಿತ್ತು!
*****
ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ ಗೆಳೆಯಾ?
ಹಾಗಾದರೆ, ನೀನು ಕವಿಯಲ್ಲ, ಪ್ರೇಮಿಯೂ ಅಲ್ಲ
- ಚಾಮರಾಜ ಸವಡಿ
4 comments:
ಆತ್ಮೀಯ
ಚ೦ದನೆಯ ಚುಟುಕುಗಳು
ಹರಿ
ಥ್ಯಾಂಕ್ಸ್ ಹರೀಶ್.
ಸವಡಿ ಚುಟುಕುಗಳು ಚೆನ್ನಾಗಿವೆ.....ಮುಂದುವರೆಸಿ...
ಥ್ಯಾಂಕ್ಸ್‌ರಿ ದೇಸಾಯಿವರೇ, ಹಳೇ ಅಭ್ಯಾಸ ಮತ್ತ ಗಂಟು ಬಿದ್ದಿದೆ.
Post a Comment