ಮೌನ ಸಾಂಗತ್ಯ

3 Nov 2010

ತಾನು ಬೀಸಿಯೇ ಇಲ್ಲ ಎಂಬಂತೆ
ಗಾಳಿ ಸುಮ್ಮನಾಯಿತು

ತಾನು ಉಕ್ಕಿಯೇ ಇಲ್ಲ ಎಂಬಂತೆ
ಕಡಲು ಸುಮ್ಮನಾಯಿತು

ಆದರೆ,
ಬೋರಲು ಬಿದ್ದ ತೆಂಗಿನ ಮರಕ್ಕೆ
ಹಾಗೆ ಅಂದುಕೊಳ್ಳಲು ಆಗಲಿಲ್ಲ

ನನ್ನ ಸ್ಥಿತಿಯೂ ಅದೇ

ಪ್ರೀತಿಸಿಯೇ ಇಲ್ಲ ಎಂದು ಹೇಗೆ ಹೇಳಲಿ?

- ಚಾಮರಾಜ ಸವಡಿ

6 comments:

ವಿ.ಆರ್.ಭಟ್ said...

ಕವನ ಚಿಕ್ಕದಾಗಿ ಚೊಕ್ಕದಾಗಿದೆ, ಲೇಖಕರ ಜೀವನವೊ ಒಂದರ್ಥದಲ್ಲಿ ಹಾಗೇ ! ಎಷ್ಟೋ ಜನ ಬರೆದದ್ದನ್ನೇ ನಕಲು ಮಾಡುತ್ತಾರೆ, ಆಗ ನಾವೂ ಕೂಡ ಬರೆದೇ ಇಲ್ಲ ಎಂದು ಸುಮ್ಮನಾಗಬೇಕಾಗುತ್ತದೆ.ಜಗಳಕ್ಕೆ ಇಳಿಯುವದು ರುಜುಮಾರ್ಗದವರ ಜಾಯಮಾನವಲ್ಲವಷ್ಟೇ ?

Chamaraj Savadi said...

ಭಟ್‌ ಅವರೇ, << ಲೇಖಕರ ಜೀವನವೊ ಒಂದರ್ಥದಲ್ಲಿ ಹಾಗೇ ! ಎಷ್ಟೋ ಜನ ಬರೆದದ್ದನ್ನೇ ನಕಲು ಮಾಡುತ್ತಾರೆ, ಆಗ ನಾವೂ ಕೂಡ ಬರೆದೇ ಇಲ್ಲ ಎಂದು ಸುಮ್ಮನಾಗಬೇಕಾಗುತ್ತದೆ.ಜಗಳಕ್ಕೆ ಇಳಿಯುವದು ರುಜುಮಾರ್ಗದವರ ಜಾಯಮಾನವಲ್ಲವಷ್ಟೇ ? >>

ಈ ಸಾಲುಗಳನ್ನು ಪ್ರಸ್ತಾಪಿಸಿದ್ದರ ಹಿನ್ನೆಲೆ ಅರ್ಥವಾಗಲಿಲ್ಲ.

ರಮೇಶ ದೇಸಾಯಿ ಅಂತರಗಂಗಿ said...

ಅದ್ಭುತ ಕವನ...

ಶಿವಪ್ರಕಾಶ್ said...

sooooper sir.. :)

samayakannada said...

ದೇಸಾಯಿ ಅವರೇ, ಧನ್ಯವಾದ. ಅದೆಂಥ ಅದ್ಭುತ ಕಂಡಿರೋ ಕವನದಲ್ಲಿ. ಅನುಭವಿಸಿದವನ ಫಜೀತಿಯೂ ಅದ್ಭುತ ಅಲ್ಲವೆ? :)

VENU VINOD said...

sundara arthapoorna kavana