ನಿರಕ್ಷರಿ ಕವಿಯ ಅಕ್ಷರಗಾಥೆ
27 Apr 2008
ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.
ಆದರೇನಂತೆ, ಕಾವ್ಯ ಸರಸ್ವತಿ ಒಲಿದಿದ್ದಳು. ಚಿಕ್ಕಂದಿನಿಂದಲೇ ಪದ್ಯದ ಗೀಳು. ಸುತ್ತಲಿನ ಪರಿಸರವೇ ಕವಿತೆಯ ವಸ್ತುಗಳಾದವು. ಅವನ್ನೇ ಪ್ರಾಸಬದ್ಧವಾಗಿ, ಜಾನಪದ ಶೈಲಿಯಲ್ಲಿ ಜೋಡಿಸಿ ಹಾಡುತ್ತಿದ್ದ ಸಿದ್ದಪ್ಪ ಸುತ್ತಲಿನ ಜನರನ್ನು ಆಕರ್ಷಿಸಿದ. ಚೆನ್ನಾಗಿವೆ ಎಂದು ಅನ್ನಿಸಿದ ಕವಿತೆಗಳನ್ನು ಊರಿನ ಕೆಲವು ಅಕ್ಷರಸ್ಥರು ಆತನಿಗೆ ಬರೆದು ಕೊಟ್ಟರು. ಅವನ್ನೇ ನೋಟ್‌ಬುಕ್‌ನಲ್ಲಿ ಇಟ್ಟುಕೊಂಡು ಹರ್ಷಪಡುತ್ತ ದಿನಗಳೆದ ಸಿದ್ದಪ್ಪ.
ಕ್ರಮೇಣ ನೋಟ್‌ಬುಕ್‌ಗಳ ಸಂಖ್ಯೆ ಬೆಳೆಯಿತು. ಆಗ ಯಾರೋ ಒಬ್ಬರು, ’ಒಂದು ಕವಿತಾ ಸಂಕಲನ ಪ್ರಕಟಿಸಬಹುದಲ್ಲ?’ ಎಂದು ಸೂಚಿಸಿದರು. ಅಕ್ಷರವೇ ಬಾರದ ತಾನು ಏನಂತ ಪ್ರಕಟಿಸಬೇಕು ಎಂದು ಅನ್ನಿಸಿದರೂ, ಹಿತೈಷಿಗಳು ಒತ್ತಾಯಿಸಿದರು. ಕವಿತೆ ಕೇಳಿ ಮೆಚ್ಚಿದ ಸಹೃದಯರು ಪ್ರಕಟಿಸಲು ಮುಂದೆ ಬಂದರು. ಒಂದಷ್ಟು ಹಣ ಸಂಗ್ರಹಿಸಿ, ೧೯೯೦ರಲ್ಲಿ ಮೊದಲ ಕವಿತಾ ಸಂಕಲನ ’ಹೊಳಿ ಸಾಲಿನ ಹೋರಿ’ ಪ್ರಕಟಿಸಿದ ಸಿದ್ದಪ್ಪ.
ಅಲ್ಲಿಂದ ಹೊಳೆ ಸಾಲಿನ ಈ ಕವಿತಾ ಹೋರಿ ನಮ್ಮ ಷೇರುಮಾರುಕಟ್ಟೆಯ ಗೂಳಿಗಿಂತ ಜೋರಾಗಿ, ಹಳಿ ತಪ್ಪದಂತೆ ಓಡುತ್ತಲೇ ಇದೆ. ಕಳೆದ ೧೭ ವರ್ಷಗಳಲ್ಲಿ ೧೬ ಪುಸ್ತಕಗಳನ್ನು ಪ್ರಕಟಿಸಿದ್ದಾನೆ ಈತ. ಇವುಗಳಲ್ಲಿ ಕವನ ಸಂಕಲನಗಳೇ ಹೆಚ್ಚು. ಈಗ ತಾನೆ ೧೭ನೇ ಕೃತಿ ’ಕೂಸಿನ ಕನಸು’ ಅಚ್ಚಿನಲ್ಲಿದೆ.
ಕವಿತೆಗಳನ್ನು ನೆನಪಿಟ್ಟಷ್ಟು ಸುಲಭವಾಗಿ ಅಚ್ಚಾದ ತನ್ನ ಎಲ್ಲ ಕವನ ಸಂಕಲನಗಳ ಶೀರ್ಷಿಕೆಗಳು ಸಿದ್ದಪ್ಪನಿಗೆ ನೆನಪಿಲ್ಲ. ’ಪುಸ್ತಕಾನ ಬಂದ ಮ್ಯಾಲ ಅದರ ಹೆಸರು ತಗೊಂಡು ಏನು ಆಗಬೇಕಾಗೈತಿ?’ ಎಂಬ ನಿರ್ಲಕ್ಷ್ಯ ಆತನದು. ಆದರೆ, ಯಾವುದಾದರೂ ವಿಷಯ ಹೇಳಿ, ’ಇದರ ಮ್ಯಾಗ ಕವಿತಾ ಬರ್ದೀಯೆನು?’ ಎಂದು ಕೇಳಿದರೆ, ಥಟ್ಟಂತ ಪೂರ್ತಿ ಕವಿತೆ ಹಾಡುತ್ತಾನೆ.
’ಕವಿತಾ ಹ್ಯಾಂಗಿರಬೇಕು ಸಿದ್ದಪ್ಪ?’ ಎಂದು ಕೇಳಿ ನೋಡಿ?
ಕವಿ ಅಂದರ ಇರಬೇಕ ಹೆಂಗೋ
ಕೈಕಾಲು ಬಿಚ್ಚಿ ಕೂಸ ಆಡಿದಂಗೋ
ಕಟ್ಟಿದ ಕವಿತಾ ಹ್ಯಾಂಗಿರಬೇಕೋ
ಬೆಳಗ ಸೂರ್ಯನ ಹೊಳಪಿರಬೇಕೋ
ತಾಯಿ ಮಾರಿ ನೋಡಿ ಕೂಸ ನಕ್ಕಂಗ
ತೋರಿ ಆಕಳಗಿ ಕರಾ ಬಿಟ್ಟಾಂಗ
ತಿಪ್ಪಿ ಕೆದರಿ ಮೇದಂಗ ಕೋಳಿ
ಖುಷಿ ಆಗಬೇಕು ಕವಿತಾ ಕೇಳಿ
ಹಸದ ಹೊಟ್ಟೀಗಿ ಹಾಕಿದಂಗ ಅನ್ನ
ಹರದ ತಿಂದಂಗ ಮಾಗೀದ ಹಣ್ಣ
ಮಗ್ಗಿ ಅರಳಿದಂಗ ಗಿಡದಾನ ಹೂವಾ
ಕವಿತಾ ಕೇಳಿ ಕರಗಬೇಕೋ ಜೀವಾ
ಹೂಡಿ ಹೊಡದಂಗ ಜೋಡೆತ್ತಿನ ಗಾಡಿ
ಹಾಡೀಗಿ ಕೊಡಬೇಕ ಶಬ್ದದ ಜೋಡಿ
ಕವಿತಾಕ ಒಂದು ಇರಬೇಕೋ ಅರ್ಥ
ಮನಸಿನ ಹಸಿಯಾ ಹೆಜ್ಜೇಯ ಗುರ್ತಾ
(ಕವಿ ಹೆಜ್ಜೆ)
ಎಂದು ಪೂರ್ತಿ ಕವಿತೆ ಹಾಡಿಬಿಡುತ್ತಾನೆ.
ಸಿದ್ದಪ್ಪ ತನ್ನ ಕವಿತೆಗಳನ್ನು ಎಂದೂ ಓದುವುದಿಲ್ಲ. ಏಕೆಂದರೆ ಆತನಿಗೆ ಓದಲು ಬರುವುದಿಲ್ಲ. ಆದರೆ, ಹಾಡುತ್ತಾನೆ. ಅಚ್ಚ ಕಂಚಿನ ಕಂಠದಲ್ಲಿ, ಬಿಗಿ ಎಳೆಯುವ ಧ್ವನಿಯಲ್ಲಿ ದೊಡ್ಡದಾಗಿ ಹಾಡುತ್ತಾನೆ. ಹಾಡುತ್ತ, ಹಾಡುತ್ತ ಕಣ್ಣರಳಿಸಿ ಖುಷಿಯಾಗುತ್ತಾನೆ. ’ಸಿದ್ಧೇಶ್ವರ ಸ್ವಾಮ್ಯಾರು ಈ ಕವಿತಾ ಕೇಳಿ ಖುಷಿಪಟ್ರು’ ಎಂದು ಆನಂದ ಪಡುತ್ತಾನೆ. ತನ್ನ ಕವಿತೆಯಲ್ಲಿ ತಾನೇ ಲೀನವಾಗುತ್ತಾನೆ.
ಸಿದ್ದಪ್ಪ ಬಿದರಿಯ ಕವಿತೆಗಳನ್ನು ಹೆಂಗರುಳಿನ ಕವಿ ಚೆನ್ನವೀರ ಕಣವಿ ಕೇಳಿ ಮೆಚ್ಚಿದ್ದಾರೆ. ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಚಂದ್ರಶೇಖ ಕಂಬಾರ ಅವರಿಗಂತೂ ಸಿದ್ದಪ್ಪ ಜಾನಪದದ ಅಪ್ಪಟ ಅವತಾರ. ಯು.ಆರ್. ಅನಂತಮೂರ್ತಿ, ಸಾ.ಶಿ. ಮರುಳಯ್ಯ ಮುಂತಾದವರು ಈತನ ಕವಿತೆಗಳನ್ನು ಮೆಚ್ಚಿದ್ದಾರೆ. ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯಂತೂ, ’ಓದು ಬರಹಗಳಿಲ್ಲ, ಸಿರಿಯ ಬಲುಹುಗಳಿಲ್ಲ, ಛಂದೋ ವಿಧಾನಗಳನರಹುವ ಸ್ನೇಹಿಗಳಿಲ್ಲ, ಹಳ್ಳಿಯ ಪರಿಸರ, ನೆಲವ ನಂಬಿ ದುಡಿವ ಜನರ ಸಂಗ, ಕಥೆ ಗೀತೆಗಳನರಿಯದ ಗ್ರಾಮೀಣರ ಒಡನಾಟ, ಆದರೇನು? ಜಾನಪದ ಕವಿ ಸಿದ್ದಪ್ಪ ಬಿದರಿ ಅವರಿಗೆ ಶಾರದೆಯ ಒಲುಮೆ!’ ಎಂದು ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ.
ಒಮ್ಮೆ ಮನೆಗೆ ಬಂದಿದ್ದ ಧೋತರಧಾರಿ ಸಿದ್ದಪ್ಪನನ್ನು ಕಂಡು ಬಾಗಿಲಾಚೆಯೇ ನಿಲ್ಲಿಸಿ ಮಾತನಾಡಿಸಿದ್ದ ಕವಿ ನಿಸಾರ್ ಅಹ್ಮದ್ ಅವರಿಗೆ, ’ನಾನೂ ಕವಿ ಅದೀನ್ರೀ ಯಪ್ಪಾ’ ಎಂದವನೇ,
ಎಷ್ಟೋ ಜನ್ಮ ಹುಟ್ಟಿದರ ಕನ್ನಡ ಮಣ್ಣಾಗ ಇರತೀನಿ
ಸತ್ಯುಳ್ಳ ಶರಣರ ಮಾತಿನ ಸವಿ ಜೇನಾಗಿರತೀನಿ
ಕನ್ನಡಿಗರ ಮಸ್ತಕದೊಳಗ ಪುಸ್ತಕಾಗಿರತೀನಿ
ಕನ್ನಡಿಗರ ದೀಪದ ಬತ್ತಿ ಎಣ್ಯಾಗ ಪಣತ್ಯಾಗಿರತೀನಿ
ಕನ್ನಡಿಗರು ಹರಿದು ತಿನ್ನು ಗಿಡದ ಹಣ್ಣಾಗಿರತೀನಿ
ಕನ್ನಡಿಗರ ಎದಿಯಾಗ ಅರಳಿದ ಮಲ್ಲಿಗಿ ಹೂವಾಗಿರತೀನಿ
ಎಂದು ಪೂರ್ತಿ ಹಾಡು ಹೇಳಿಯೇಬಿಟ್ಟ. ಅವಾಕ್ಕಾದ ನಿಸಾರ ಅಹ್ಮದ ಈತನ ಕೈಹಿಡಿದು ಒಳಗೆ ಕರೆದುಕೊಂಡು ಹೋಗಿ, ತಾವೇ ಬಾಳೆಹಣ್ಣು ಸುಲಿದು ತಿನ್ನಲು ಕೊಟ್ಟು, ಗಂಟೆಗಟ್ಟಲೇ ಮಾತಾಡಿ, ಆತನ ಹಾಡು ಕೇಳಿ ಸಂತಸಪಟ್ಟರಂತೆ. ಅವರ ಕಡೆಯಿಂದಲೂ ತನ್ನದೊಂದು ಕವಿತಾ ಸಂಕಲನಕ್ಕೆ ಮುನ್ನುಡಿ ಬರೆಸಿಕೊಂಡಿದ್ದಾನೆ ಸಿದ್ದಪ್ಪ.
ಇಂತಹ ಆಶು ಕವಿ ಸಿದ್ದಪ್ಪ ದಸರಾ ಕವಿಗೋಷ್ಠಿಗಳೂ ಸೇರಿದಂತೆ ಬೆಂಗಳೂರು, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಚಾಲುಕ್ಯೋತ್ಸವ, ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವಿತೆ ಹಾಡಿದ್ದಾನೆ. ಧಾರವಾಡ ಮತ್ತು ಮೈಸೂರು ಆಕಾಶವಾಣಿಗಳು ಈತನ ಸಂದರ್ಶನ ಪ್ರಸಾರ ಮಾಡಿವೆ. ಉದಯ ಟಿವಿ ಪರಿಚಯ ಸಂದರ್ಶನ ಪ್ರಸಾರ ಮಾಡಿದೆ. ರಾಜ್ಯದ ಹದಿಮೂರು ಕಡೆ ಈತನನ್ನು ಕರೆಸಿ ಸನ್ಮಾನಿಸಲಾಗಿದೆ. ಎಲ್ಲಕ್ಕಿಂತ ಹೆಮ್ಮೆಯ ಸಂಗತಿ ಎಂದರೆ, ೨೦೦೩ರಲ್ಲಿ ಬಾಗಲಕೋಟೆ ಜಿಲ್ಲೆಯ ೯ನೇ ತರಗತಿಯ ವಾರ್ಷಿಕ ಪ್ರಶ್ನೆಪತ್ರಿಕೆಯಲ್ಲಿ, ಸಿದ್ದಪ್ಪನ ಕುರಿತು ಗದ್ಯಭಾಗದ ಪ್ರಶ್ನೆ ಕೇಳಲಾಗಿದೆ.
ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳ ತಂದೆಯಾಗಿರುವ ಸಿದ್ದಪ್ಪ, ಎಲ್ಲ ಮಕ್ಕಳಿಗೆ ಸಾಧ್ಯವಾದಷ್ಟೂ ವಿದ್ಯಾಭ್ಯಾಸ ಮಾಡಿಸಿದ್ದಾನೆ. ಈಗ ಆತನ ಕವಿತೆಗಳಿಗೆ ಮಕ್ಕಳೇ ಲಿಪಿಕಾರರು. ಹಾಡು ಹೇಳುತ್ತ, ಹೊಲದಲ್ಲಿ ದುಡಿಯುತ್ತ ಈ ಹಾಡುಹಕ್ಕಿ ಬೆಳೆಯುತ್ತಲೇ ಇದೆ. ಅದಕ್ಕೆ ತಕ್ಕಂತೆ ಕವನ ಸಂಕಲನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಸಿದ್ದಪ್ಪನ ಹಾಡು ಕೇಳಬೇಕೆಂದರೆ, ಬಾಗಲಕೋಟೆ ಜಿಲ್ಲೆ ಬಿಳಗಿಯ ಜನತಾ ಪ್ಲಾಟ್‌ಗೆ ಹೋಗಿ. ದೂರದಿಂದಲೇ ಹಾರೈಸಬೇಕೆಂದರೆ, ದೂರವಾಣಿ (ಪಿಪಿ) ೦೮೫೩೪-೪೭೬ ೦೧೪ಗೆ ಕರೆ ಮಾಡಿ.
- ಚಾಮರಾಜ ಸವಡಿ
ಕೊಡೆಯೊಂದಿಗೆ ಅರಳುವ ನೆನಪುಗಳು
ಹಳೆಯ ಧಾರವಾಡವನ್ನು ನೆನಪಿಸುವಂತೆ ಇಲ್ಲಿ ಮುಂಗಾರು ಹದವಾಗಿ ಕುಟ್ಟತೊಡಗಿದೆ. ತಿಂಗಳುಗಟ್ಟಲೇ ಸೂರ್ಯನ ದರ್ಶನವಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ದಟ್ಟ ಮರಗಿಡಗಳ ಮೇಲ್ಭಾಗದಲ್ಲಿ ಹಸಿರು ಹಾವಸೆ ತುಂಬಿಕೊಂಡು, ಹಾಡಹಗಲಲ್ಲೇ ತುಂಬಿರುವ ಕತ್ತಲೆಗೆ ಮಂಕು ಫ್ಲೋರೋಸೆಂಟ್ ಬೆಳಕಿನ ಪ್ರಭೆ. ಈಚೆಗೆ ಒಂದಿಷ್ಟು ರಸ್ತೆಗಳು ಡಾಂಬರ್‌ನ ಪುಣ್ಯ ಕಂಡಿವೆ. ಹೀಗಾಗಿ, ನೀನು ಕಪ್ಪೋ, ನಾನು ಕಪ್ಪೋ ಎಂಬಂತೆ ಮುಂಗಾರು ಮೋಡಗಳು ರಸ್ತೆ ಬಣ್ಣದ ಜೊತೆ ಸ್ಪರ್ಧೆಗೆ ಇಳಿಯುತ್ತವೆ. ಆಗೆಲ್ಲ ಕ್ಯಾಂಪಸ್ ತುಂಬ ಭರ್ಜರಿ ಮಳೆ.
ನೋಡಬೇಕಾದ ನೀವೇ ಇನ್ನೂ ಬಂದಿಲ್ಲ!
ಈಗಂತೂ ಕ್ಯಾಂಪಸ್ ತುಂಬ ಕಾಣುವುದು, ಒಂದೋ ಉದ್ದನೆಯ ಸಾಲುಗಳು, ಇಲ್ಲವೇ ಅಲ್ಲಲ್ಲಿ ನಿಂತ ಗುಂಪುಗಳು. ಸಾಲುಗಳ ಕತೆ ನಿಮಗೆ ಗೊತ್ತೇ ಇದೆ. ಜಗತ್ತಿನ ಎಲ್ಲೆಡೆ ಕಂಪ್ಯೂಟರ್ ತಂತ್ರಜ್ಞಾನ ಬಂದಿರಬಹುದು. ಅದನ್ನು ಹಳ್ಳಿಗಳ ಜನ ಕೂಡ ಬಳಸುತ್ತಿರಬಹುದು. ಆದರೆ, ನಮ್ಮ ವಿಶ್ವವಿದ್ಯಾಲಯದ ಅಡ್ಮಿಶನ್ ಫಾರ್ಮ್ ಕೊಡುವುದರಿಂದ ಹಿಡಿದು ಫೀಸ್ ಕಟ್ಟಿಸಿಕೊಂಡು ಪ್ರವೇಶ ನೀಡುವವರೆಗೆ, ಎಲ್ಲ ವಿಧಾನವೂ ಓಬಿರಾಯನ ಕಾಲದ್ದೇ ಅಲ್ಲವೆ?
ಯಾವುದಾದರೂ ಕೋರ್ಸ್‌ಗೆ ಅರ್ಜಿ ಹಾಕಿದರೆ ಪ್ರವೇಶ ಸಿಕ್ಕಿಬಿಡುವ ಕಾಲವಲ್ಲ ಇದು. ಹೀಗಾಗಿ, ಎರಡು-ಮೂರು ಕೋರ್ಸ್‌ಗಳಿಗೆ ಅರ್ಜಿ ಹಾಕುವುದು ಸಾಮಾನ್ಯ ತಾನೆ? ಅದಕ್ಕಾಗಿ ನೀವು ಮೊದಲು ಬ್ಯಾಂಕ್‌ನಲ್ಲಿ ನಿಂತು ಚಲನ್ ತುಂಬಬೇಕು. ನಂತರ, ಅದನ್ನು ಪ್ರಸಾರಾಂಗಕ್ಕೆ ತಂದು ಅರ್ಜಿ ಪಡೆದುಕೊಳ್ಳಬೇಕು. ತುಂಬಿದ ಅರ್ಜಿಗೆ ಅಟೆಸ್ಟ್ ಮಾಡಿಸಿದ ಹತ್ತಾರು ದಾಖಲೆಗಳನ್ನು ಸೇರಿಸಬೇಕು. ಅಟೆಸ್ಟ್ ಮಾಡಿಸಲು ಗೆಜೆಟೆಡ್ ದರ್ಜೆಯ ದರ್ಪಿಷ್ಠರನ್ನು ಹುಡುಕಿಕೊಂಡು ಅಲೆಯಬೇಕು. ನೀವು ಪ್ರತಿಭಾವಂತರಾಗಿದ್ದರೂ ಸರಿ, ಇಡೀ ಜಗತ್ತಿಗೆ ತಂತ್ರಜ್ಞಾನ ಬಂದಿದ್ದರೇನಂತೆ? ನಮ್ಮ ವಿಶ್ವವಿದ್ಯಾಲಯಗಳು, ಅವುಗಳ ತಮ್ಮಂದಿರಾದ ಮಹಾವಿದ್ಯಾಲಯಗಳು, ಅವುಗಳ ಮರಿ ತಮ್ಮಂದಿರಾದ ಪದವಿಪೂರ್ವ ಕಾಲೇಜುಗಳು ಬದಲಾಗುವುದು ಅಷ್ಟು ಸುಲಭವಲ್ಲ. ಅವಕ್ಕೆ ಓಬಿರಾಯನೇ ಇಷ್ಟ.
ಹೋಗಲಿ ಬಿಡು, ಚೆಂದದ ಮುಂಗಾರು ಮಳೆಯ ಮುನ್ನುಡಿಗೆ ಓಬಿರಾಯನೇ ಮೊದಲ ಅಧ್ಯಾಯವಾಗುವುದು ಬೇಡ. ಈ ದರಿದ್ರ ಪ್ರವೇಶ ಪದ್ಧತಿಯನ್ನು ಮುಗಿಸಿದರೆ ಸಾಕು, ಓದು ಮುಗಿಯುವತನಕ ಧಾರವಾಡ ಅತಿ ಸುಂದರ. ಅದಕ್ಕೆಂದೇ ಅಲ್ಲವೆ ಈ ಊರಲ್ಲಿ ಕಲಿಯಬೇಕೆಂದು ನಾವು ನೀವೆಲ್ಲ ಹಂಬಲಿಸಿದ್ದು? ದೂರದ ಊರು ಎಂದು ಮನೆಯಲ್ಲಿ ಧಾವಂತ ಪಟ್ಟರೂ, ಮುಂಗಾರಿನೂರಿನ ಬಣ್ಣಬಣ್ಣದ ಹಸಿರಿನ ಕನಸುಗಳು ಕೈಬೀಸಿ ಕರೆದಿದ್ದು? ಅಲ್ಲಲ್ಲ, ಮೋಡಗಳ ಮೂಲಕ ಸಂದೇಶ ಕಳಿಸಿದ್ದು? ಹತ್ತಿರದ ಬಸ್ ರಸ್ತೆಯವರೆಗೆ ನಡೆದು ಬಂದು, ಅಲ್ಲಿಂದ ಟೆಂಪೋ ಹತ್ತಿ ಹತ್ತಿರದ ದೊಡ್ಡ ಊರಿಗೆ ಬಂದು, ಅಲ್ಲಿಂದ ಎರಡು ಬಸ್‌ಗಳನ್ನು ಬದಲಾಯಿಸಿದ ಮೇಲೆ ಅಲ್ಲವೆ ಹುಬ್ಬಳ್ಳಿ ಸಿಕ್ಕಿದ್ದು?
ಅಲ್ಲಿಂದ ಧಾರವಾಡಕ್ಕೆ ಮಾತ್ರ ಒಂದೇ ಬಸ್ ಸಾಕು. ನವಿಲೂರಿನ ಸೇತುವೆ ಇಳಿಯುತ್ತಲೇ ಇದ್ದಕ್ಕಿದ್ದಂತೇ ವಾತಾವರಣ ಬದಲಾಯಿಸಿಬಿಡುತ್ತದೆ, ಅಲ್ಲವೆ? ಕಾಂಕ್ರೀಟ್‌ನ ಹುಬ್ಬಳ್ಳಿ ಹಿಂದಾಗಿ, ಕಾಡಿನಂತಹ ಧಾರವಾಡ ಅರಳುತ್ತ ಹೋಗುತ್ತದೆ. ವಿದ್ಯಾಗಿರಿ ಪ್ರವೇಶಿಸುತ್ತಲೇ ಕನಸಿನ ಊರು ಬಂದ ಅನುಭವ.
ಇದಪ್ಪ ಧಾರವಾಡ! ಅದಕ್ಕೇ ಅಲ್ಲವೇ ಓದುವ ಹುಚ್ಚಿನ ಅಥವಾ ಪಕ್ಕಾ ಹುಚ್ಚು ಕೆರಳಿರುವ ಜನ ಇದನ್ನು ಹುಡುಕಿಕೊಂಡು ಅಷ್ಟು ದೂರದಿಂದ ಬರುವುದು? ವಿದ್ಯಾಗಿರಿಯಿಂದ ದಾರಿಯುದ್ದಕ್ಕೂ ಸಿಗುವ ಟ್ಯೂಷನ್ ಬೋರ್ಡ್‌ಗಳನ್ನು ಓದುತ್ತ ಸಾಗುವಷ್ಟೊತ್ತಿಗೆ ಸಿಬಿಟಿ ಬಂದುಬಿಡುತ್ತದೆ. ’ಕರ್ನಾಟಕ ವಿಶ್ವವಿದ್ಯಾಲಯ’ ಎಂದು ಕೆಟ್ಟ ಕಪ್ಪಕ್ಷರದ ಬೋರ್ಡ್ ಹೊತ್ತ ಕಾಫಿ ಬಣ್ಣದ ಬಸ್ಸೊಂದು ಮೂರ್ಛೆ ರೋಗಿ ಮುಲಗುಟ್ಟುವಂತೆ ಅದುರುತ್ತಿರುತ್ತದೆ. ಹೌದು ಮಾರಾಯಾ, ಇದು ನಿಜಕ್ಕೂ ಬಸ್ಸೇ. ರಸ್ತೆ ಕೊಚ್ಚೆ ಸಿಡಿದು ಬಣ್ಣ ಬದಲಾಗಿದೆಯಷ್ಟೇ. ಇನ್ನು ಬಸ್ಸೋ, ಅದೂ ಓಬಿರಾಯನ ಕಾಲದ್ದೇ ತಮ್ಮಾ. ಮುಟ್ಟುವ ಗ್ಯಾರಂಟಿಯಂತೂ ಉಂಟು. ಬೇಗ ಹತ್ತು. ಸೀಟಾದರೂ ಸಿಕ್ಕೀತು.
ಅಲ್ಲೆಲ್ಲೋ ನಿಂತು ಎಲೆಯಡಿಕೆ ಜಗಿಯುತ್ತಿದ್ದ ಡ್ರೈವರ್ ಎಂಬ ಆಸಾಮಿ ಯಾರೋ ಕರೆದರೆಂಬಂತೆ ಥಟ್ಟನೇ ಒಳ ಬಂದು ಅದುರುತ್ತಿರುವ ಬಸ್‌ನ ಆಕ್ಸಿಲೇಟರ್ ಅದುಮುತ್ತ ಏಕೋ ಹೊರಳಿ ನೋಡುತ್ತಾನೆ. ನಾವೇ ಅಲ್ಲವೇ ಅವನ ಕಣ್ಣಿಗೆ ಬೀಳುವುದು? ಇಷ್ಟು ದೊಡ್ಡ ಟ್ರಂಕ್, ಗೊಬ್ಬರ ಚೀಲದ ಒಂದಿಷ್ಟು ಲಗೇಜ್, ಸೂಕ್ಷ್ಮವಾಗಿ ಮೂಗೆಳೆದುಕೊಂಡರೆ ಘಮ್ಮೆಂದು ರಾಚುವ ಜೋಳದ ಬಿರುಸು ರೊಟ್ಟಿ, ಗುರೆಳ್ಳು ಚಟ್ನಿ ಪುಡಿಯ ಸುವಾಸನೆ ಬಲ್ಲ ಅವ, ’ಕ್ಯಾಂಪಸ್‌ಗೆ ಹೊಂಟಾರ’ ಎಂಬಂತೆ ನಕ್ಕು ಗೇರ್ ಬದಲಿಸುತ್ತಾನೆ. ಅದುವರೆಗೆ ಸಂಬಂಧವಿಲ್ಲದವರಂತೆ ಕೆಳಗೆ ನಿಂತಿದ್ದ ಜವಾರಿ ಮಂದಿ, ಸಿಕ್ಕಸಿಕ್ಕಲ್ಲೆಲ್ಲ ಎಲೆಯಡಿಕೆ ದ್ರಾವಣ ಉಗುಳಿ ಅವಸರದಿಂದ ಬಸ್ ಹತ್ತುತ್ತಾರೆ.
ನಿಮ್ಮ ಯುನಿವರ್ಸಿಟಿ ಪ್ರವಾಸ ಪ್ರಾರಂಭವಾಗಿದ್ದು ಹೀಗೆ ತಾನೆ?
ಅಷ್ಟೊತ್ತಿಗೆ ಮಳೆ ಪ್ರಾರಂಭವಾಗಿರುತ್ತದೆ. ಬೆಂಗಳೂರಿನಲ್ಲೀಗ ಸಂಜೆ ಐದರ ಮಳೆ ಅಪರೂಪ. ನಮ್ಮ ಕವಿ ಕೆ.ಎಸ್. ನಿಸಾರ್ ಅಹಮದ್ ಅದನ್ನು ನೋಡಬೇಕೆಂದರೂ ಧಾರವಾಡಕ್ಕೇ ಬರಬೇಕು. ಇದ್ದಕ್ಕಿದ್ದಂತೆ ಕವಿದುಕೊಂಡ ಮೋಡ, ಮಳೆಯಾಗಿ ರಪರಪ ಬೀಳತೊಡಗುತ್ತದೆ. ಧಾರವಾಡದಲ್ಲಿ ಇಂತಹ ಮಳೆಯಿಂದಾಗಿಯೇ ಬಸ್‌ಗಳು ರಾಡಿಯಾಗುವುದು ಹಾಗೂ ಇದ್ದ ರಾಡಿ ಕಳೆದುಕೊಂಡು ಸ್ವಚ್ಛವಾಗುವುದು. ಡ್ರೈವರ್ ಎಂಬ ಆಪತ್ಬಾಂಧವ ಬಸ್ ಅನ್ನು ಮಾರಿನಿಂದ ಮಾರಿಗೆ ನಿಲ್ಲಿಸುತ್ತ, ಎನ್ನ ಸಮಾನರಾರಿಹರು ಎಂಬಂತೆ ಒರಲುವ ಅದನ್ನು ಮರಗಳ ಹಸಿರು ಕತ್ತಲೆ ತುಂಬಿಕೊಂಡ ರಸ್ತೆಗಳೊಳಗಿಂದ ನುಗ್ಗಿಸುತ್ತ, ಜುಬಿಲಿ ಸರ್ಕಲ್, ಕೆಸಿಡಿ ಸರ್ಕಲ್, ಸಪ್ತಾಪುರ ಬಾವಿ, ಚೆನ್ನಬಸವನಗರ, ಶ್ರೀನಗರ ಸರ್ಕಲ್‌ನಲ್ಲಿ ಎಡಕ್ಕೆ ತಿರುಇ, ರೈಲ್ವೇ ಹಳಿ ದಾಟಿ ಒಳ ನುಗಿದನೆಂದರೆ-
ಅಗೋ ಬಂತು ಕರ್ನಾಟಕ ವಿಶ್ವವಿದ್ಯಾಲಯ!
ಇಲ್ಲೇ ಅಲ್ಲವೇನೋ ನಾವೆಲ್ಲ ಎರಡು ವರ್ಷ ಇದ್ದುದು? ಎಲ್ಲರೂ ಹೀಗೇ ಅಲ್ಲವಾ ಒಳಗೆ ಬಂದಿದ್ದು? ಏನೆಲ್ಲ ಅಂದುಕೊಂಡಿದ್ದ, ಅಂದುಕೊಂಡಿದ್ದಕ್ಕಿಂತ ಬೇರೇನೆಲ್ಲ ಆಗಿದ್ದ ಇಲ್ಲೇ ಅಲ್ಲವೇ ನಮ್ಮ ಬದುಕುಗಳು ಅರಳಿದ್ದು? ಟೊಂಗೆಗಳು ಕವಲೊಡೆದಿದ್ದು? ಮತ್ತು, ದೂರದ ಊರುಗಳಲ್ಲಿ ಅನ್ನ-ಆಶ್ರಯ ಅರಸಿಕೊಂಡು ಇಲ್ಲಿಂದ ಹೋಗಿದ್ದು? ಅದ್ಹೇಗೋ ನಾನೊಬ್ಬ ಮಾತ್ರ ಮರಳಿ ಇಲ್ಲಿಗೆ ಬಂದುಬಿಟ್ಟಿದ್ದೇನೆ. ಕ್ಯಾಂಪಸ್‌ನ ಹಸಿರು ಕತ್ತಲೆಯ ಜೊಂಪಿನಲ್ಲಿ, ಮಳೆ ಹನಿಗಳ ತಂಪಿನಲ್ಲಿ, ನಿಮ್ಮನ್ನೆಲ್ಲ ನೆನಪಿಸಿಕೊಳ್ಳುತ್ತ ಒಂಟಿಯಾಗಿಬಿಟ್ಟಿದ್ದೇನೆ.
ನಿಮ್ಮನ್ನೆಲ್ಲ ಹುಡುಕಿಕೊಂಡು ಮುಂಗಾರು ಆಗಲೇ ಇಲ್ಲಿ ಬಂದಾಯ್ತು. ಕ್ಯಾಂಪಸ್ ಕಾಯುತ್ತಿದೆ. ಹಸಿರು ಕಾಯುತ್ತಿದೆ. ನಿರ್ಜನ ಡಾಂಬರ್ ರಸ್ತೆಗಳು, ಶಾಲ್ಮಲಾ ಕಣಿವೆಯ ನವಿಲುಗಳು ಕಾಯುತ್ತಿವೆ. ನೀವು ಬರುವುದು ಯಾವಾಗ?
ತಡ ಮಾಡಬೇಡಿ. ಬೇಗ ಬಂದುಬಿಡಿ.
- ಚಾಮರಾಜ ಸವಡಿ
(೨೦೦೬ರಲ್ಲಿ ಧಾರವಾಡದ ಪ್ರಜಾವಾಣಿ ವರದಿಗಾರನಾಗಿದ್ದಾಗ ಬರೆದಿದ್ದು)
ಹದಿನಾಲ್ಕು ವರ್ಷದ ಹಿಂದಿನ ಒಂದಿಷ್ಟು ಚುಟುಕುಗಳು
25 Apr 2008
ಇದ್ದಕ್ಕಿದ್ದಂತೆ
ಮಾತು ಕಳೆದುಕೊಂಡು
ಮೌನಿಯಾಗಿ
ಎಲ್ಲೋ ದಿಟ್ಟಿಸುವವ
ಹೆಗಲ ಮೇಲೆ ಕೈಇಟ್ಟರೆ
ಬೆಚ್ಚುವವ
ಕಾರಣವಿಲ್ಲದೇ
ಭಾವುಕನಾಗುವವ
ಮೂಕ ಪ್ರೇಮಿ
೨.
ದುಷ್ಯಂತನನ್ನು
ಶಕುಂತಲೆ ಪ್ರೇಮಿಸಿದ್ದ
ಅವನು ಮಹಾರಾಜನೆಂದಲ್ಲ
ಪುರುಷನೆಂದು
೩.
ಸಲೀಸಾಗಿ
ಪಾಗಾರ ಹತ್ತಿಳಿಯುವ ಹುಡುಗಿ
ಹುಡುಗನ ಗಡ್ಡ-ಮೀಸೆ ಗೇಲಿ ಮಾಡುವವಳು
ಬಾಯಿಗೆ ಕೈ ಅಡ್ಡ ಹಿಡಿದು ನಗುವವಳು
ಒಮ್ಮಲೇ
ಮಾತಿಲ್ಲದೇ, ನಗುವಿಲ್ಲದೇ
ಗಂಟೆಗಟ್ಟಲೇ ಕೂಡುವುದು
ಏನನ್ನೋ ಧೇನಿಸುವುದು
ಕಂಡಾಗೆಲ್ಲ
ಪ್ರಾಯ ಅಚ್ಚರಿ ಹುಟ್ಟಿಸುತ್ತದೆ
೪.
ಆಯ
ತಪ್ಪುವುದು
ಅನಾಯಾಸವಾಗಿ
೫.
ಅಳು
ಬದುಕು
೬.
ಈ ಕೈಗಳಿಗೂ
ಕಣ್ಣಿದೆ
ಏಕೆಂದರೆ
ಇದು
ಮುಟ್ಟಿ ನೋಡಬಲ್ಲುದು
೭.
ಇಲ್ಲಿ ಹುಟ್ಟಿದ್ದೊಂದೇ ಅಲ್ಲ
ಈ ಮಣ್ಣು, ನೀರು, ಊರು, ಜನರ
ಮಧ್ಯೆ
ಕಣ್ತೆರೆದು, ಅಂಬೆಗಾಲಿಕ್ಕಿ
ಮೀಸೆ ಬೆಳೆಸಿಕೊಂಡು ಬೆಳೆದಿದ್ದು
ನೋವು-ನಲಿವು ಉಂಡಿದ್ದು, ಕಂಡಿದ್ದು
ಎಲ್ಲವೂ ಲಾಭ
೮.
ಕಾಮವಿನ್ನೂ ಹುಟ್ಟದ ವಯಸ್ಸಿನಲ್ಲಿ
ಆಡಿದ ಆಟ, ಓದಿದ ಓದು
ನಗು, ಸಡಗರ, ಕೇಕೆ
ಮತ್ತು ನೋವಿನ ವಿದಾಯ
ಎಷ್ಟೊಂದು ಚಂದವಿತ್ತು!
ಇವತ್ತು
ದೇಹದಲ್ಲಿ ಪ್ರಾಯ ತುಂಬಿ
ಕಾಮ ತುಂಬಿ
ಪ್ರತಿ ನಡೆಯಲ್ಲಿ ಹಿಂಜರಿತ, ಪುಳಕ
ಮತ್ತು ಖಾಲಿತನ!
೯.
ಕಾವಿಯೊಳಗಿನ ಈ ದೇಹಗಳು
ಬಾಲ್ಯದಲ್ಲೋ, ಯೌವನದಲ್ಲೋ
ಸೆರಗ ಮರೆಗೆ ಮೊರೆ ಹೋಗಿ
ಜೀವ ಸೆಲೆ ಪಡೆದವುಗಳೇ!
೧೦.
ಎಲ್ಲಾ ಋಷಿಗಳ
ತಪಸ್ಸಿಗೆ
ಅರ್ಥ ಬಂದಿದ್ದು
ಅವರು ಹೆಣ್ಣಿಗೆ
ಸೋತಾಗಲೇ
೧೧.
ನೀನು ದೂರವಾದದ್ದಕ್ಕಲ್ಲ
ನಿನ್ನ
ನೆನಪಾಗುತ್ತಿರುವುದಕ್ಕೆ
ಮತ್ತು
ಅದನ್ನು ಮರೆಯಲಾಗದ್ದಕ್ಕೆ
೧೨.
ಖಚಿತ ವ್ಯಾಖ್ಯೆ ನೀಡಬಲ್ಲೆನಾದರೆ
ಪ್ರೇಮದ ಬಗ್ಗೆ
ಏನೂ ಗೊತ್ತಿಲ್ಲ
ಎಂದೇ ಅರ್ಥ
೧೩.
ಬದುಕು ಶುರುವಾಗುವುದು
ಎಲ್ಲರಿಗೂ ಬೋಧಿಸಬೇಕೆಂಬ
ಆಸೆಯಾಚೆ
ಎಲ್ಲರಿಗೂ ಮಾದರಿಯಾಗಬೇಕೆಂಬ
ಬಯಕೆಯಾಚೆ
ಈ ಹುಲ್ಲು ಗರುಕೆಯಂತೆ, ಈ ನೀರ ಹನಿಯಂತೆ
ಸುಮ್ಮನೇ ಹುಟ್ಟಿ, ನಗತೊಡಗಿದಾಗ
೧೪.
ಅಪ್ಪ
ಕಿರಿಯ ಜೀವಿಗಳ ಬಣ್ಣ
ಮಿಂಚು, ತೀವ್ರತೆಗಳ ನಡುವೆ
ಬೆಚ್ಚಿದವನಂತೆ, ತಳ್ಳಲ್ಪಟ್ಟವನಂತೆ
ಕಂಡಾಗೆಲ್ಲ
’ಅಪ್ಪಾ, ಈ ವ್ಯತ್ಯಾಸ ವಯಸ್ಸಿನದು’
ಎಂದು ಹೇಳಬೇಕೆನಿಸಿದರೂ
ಆಗದೇ ಮೌನಿಯಾಗುತ್ತೇನೆ
೧೫.
ಮಳೆ,
ಜೀರುಂಡೆ, ದೀಪದ ಹುಳು,
ಕಪ್ಪೆಗಳ ಕಛೇರಿ
ವಿದ್ಯುತ್ ಇಲ್ಲದ ರಾತ್ರಿ
ಎಲ್ಲೋ ಕಿರುಚಿ ಅಳುವ ಮಗು-
ನನ್ನ ಬಾಲ್ಯವೇಕೆ ನೆನಪಾಗುತ್ತಿದೆ?
೧೬.
ಕುರುಹುಗಳೆಂದರೆ:
ವಾದಿಸದೇ ಒಪ್ಪಿಕೊಳ್ಳುವುದು
ಮತ್ತು
ಒಪ್ಪಿಕೊಳ್ಳದೇ ವಾದಿಸುವುದು
೧೭.
ನನ್ನ ಪ್ರತಿಭೆಗೆ
ಬೆಲೆ ಬಂದಿದ್ದು
ನನ್ನ ಮೂರ್ಖತನದಿಂದ
ನನ್ನ ಗೆಲುವುಗಳಿಗೆ
ಮೆರುಗಿನ ಅಂಚು ಕೊಟ್ಟಿದ್ದು
ನನ್ನ ಸೋಲುಗಳು
೧೮.
ಕನಸುಗಳೇಕೆ ಚಂದ ಅಂದರೆ
ಅವು ನನಸಾಗುವುದಿಲ್ಲ
ಅದಕ್ಕೆ
ಬದುಕುವುದೇಕೆ ಚಂದ ಅಂದರೆ
ಸಾಯಲೇಬೇಕು ನೋಡು
ಅದಕ್ಕೆ
೧೯.
ಬದುಕು
ಕಾಮದ ಸೊಗಸು
ಮತ್ತು
ಕಾಮದಾಚೆಯ ಸೊಗಸು
೨೦.
ಕಣ್ಣು
ಮುಚ್ಚುವುದು
ದಣಿವಿಗೆ
ಅಮಲಿಗೆ
ಮತ್ತು ಸಾವಿಗೆ
ಅರಳುವುದು
ಒಸಗೆಗೆ
ಬೆಸುಗೆಗೆ
ಮತ್ತು ಬದುಕಿಗೆ
೨೧.
ಕಾಲದೊಂದಿಗೆ ಕಾಲು ಹಾಕು ಮನಸೇ
ಹಿಂದೆ ಉಳಿದು ನರಳಬೇಡ
ನಿನ್ನೆ ಮುಗಿದಿದೆ, ನಾಳೆ ದೂರವಿದೆ
ನಿನ್ನ ಕೈಲೇ ಇದೆ ಇಂದಿನ ದಿನವೆಲ್ಲ
೨೨.
ಅವಳೆದುರು ನಿಂತಾಗ ನಿಟ್ಟುಸಿರಿಡಬೇಡ
ಸುರಿಸಿದ ಕಣ್ಣೀರ ಲೆಕ್ಕ ಹೇಳಬೇಡ
ಮಳೆ ಸುರಿಸಿ ಕಳೆಯಾದ ಮುಗಿಲಂತಿರು
ಕೆಸರಿಳಿದು ತಿಳಿಯಾದ ಕೆರೆಯಂತಿರು
೨೩.
ಮಾತೆಂಬ ಭರ್ಚಿ ಎಸೆದೆ
ಪ್ರೀತಿ ಸತ್ತು ಹೋಯಿತು
ಉಳಿದಿದ್ದು ಅದರ ಅವಶೇಷ ಮಾತ್ರ
ಬಾಯಿ ತೆರೆಯುವ ಮುನ್ನ
ಹೃದಯ ತುಸು ಧ್ಯಾನಿಸಲಿ
ಪ್ರೀತಿ ಅರಳಲು ಇದೊಂದೇ ಸೂತ್ರ
೨೪.
ನಿನ್ನನ್ನು ನೋಡಿದರೆ
ಖುಷಿಯಾಗುತ್ತದೆ
ಎಷ್ಟು ಖುಷಿಯಾಗುತ್ತದೆ ಎಂದರೆ
ಹೇಗೆ ಹೇಳಲಿ?
೨೫.
ತಾನು ಬೀಸಿಯೇ ಇಲ್ಲ ಎಂಬಂತೆ
ಗಾಳಿ ಸುಮ್ಮನಾಯಿತು
ತಾನು ಉಕ್ಕಿಯೇ ಇಲ್ಲ ಎಂಬಂತೆ
ಕಡಲು ಸುಮ್ಮನಾಯಿತು
ಆದರೆ
ಬೋರಲು ಬಿದ್ದ ಮರಕ್ಕೆ
ಹಾಗೆ ಅಂದುಕೊಳ್ಳಲು ಆಗಲಿಲ್ಲ
ನನ್ನ ಸ್ಥಿತಿಯೂ ಅದೇ ಕಣೇ
ಪ್ರೀತಿಸಿಯೇ ಇಲ್ಲ ಎಂದು
ಹೇಗೆ ಹೇಳಲಿ?
- ಚಾಮರಾಜ ಸವಡಿ
ಹದಿನಾಲ್ಕು ವರ್ಷದ ಹಿಂದಿನ ಕವಿತೆಗಳು
ಹಾಗೆ ಆಳದಿಂದ ತುದಿಗೇರಿ, ಹಚ್ಚಗೆ ಅರಳಿ ಬೆಚ್ಚಿಸಿದ ಒಂದಿಷ್ಟು ನೆನಪುಗಳಿವು. ಮರೆತೇನೆಂದರೆ ಮರೆಯಲಿ ಹ್ಯಾಂಗ ಎಂಬ ಕವಿವಾಣಿಯಂತೆ, ಇವು ಮತ್ತೆ ಬಂದಿವೆ. ಆಳದಿಂದ ಮೇಲಕ್ಕೆ, ಹಾಳೆಯಿಂದ ಬ್ಲಾಗಿಗೆ ಬಂದ ಇವಕ್ಕೆ ಯಾವ ಮೌಲ್ಯವಿದೆಯೋ ಗೊತ್ತಿಲ್ಲ.
ಆದರೆ, ಇವು ನನ್ನ ನೆನಪಿನ ತುಣುಕುಗಳು. ಇವನ್ನು ಜೋಡಿಸಬೇಕೆ, ರೂಪ ಕೊಡಬೇಕೆ ತಿಳಿಯದೇ ಬಂದ ಹಾಗೆ, ಹೆಕ್ಕಿ ಪೋಣಿಸಿದ್ದೇನೆ.
ಕವಿತೆ/ಕವಿ ಎಂದರೆ ನಾನೇ ಓಟ ಕೀಳುವ ಈ ದಿನಗಳಲ್ಲಿ, ನನ್ನ ಹಳೆಯ ಕವಿತೆಗಳನ್ನು ಓದುತ್ತ ಮನಸ್ಸು ಆಳ ಆಳಕ್ಕೆ ಜಾರುತ್ತಿದೆ. ಏನೋ ನೆನಪು, ಏನೋ ನೋವು. ಓದುತ್ತ, ಓದುತ್ತ ಮನಸ್ಸು ಹದಿನಾಲ್ಕು ವರ್ಷ ಹಿಂದೆ ಹೋಗಿದೆ.
ಈ ಗುಂಗು ಯಾವಾಗ ಬಿಡುತ್ತದೋ!
- ಚಾಮರಾಜ ಸವಡಿ
೧.
ಹುಡುಕುವಾಗ
ಎಂದೋ ಬರೆದಿಟ್ಟ ಕವನದ ದೂಳು
ಸವರಿ ಕಣ್ಣಾಡಿಸುತ್ತೇನೆ
ಇಲ್ಲೆಲ್ಲ ನನ್ನ ಹೃದಯ
ಮಸಿಯಾಗಿ ಹರಿದು
ಅಕ್ಷರಗಳಾಗಿ ಚದುರಿ ಬಿದ್ದಿದೆ
ಇದೊಂದು ವಿಚಿತ್ರವೇ ಸರಿ-
ಹೃದಯ ಹಿಂಡುವ ನೆನಪುಗಳನ್ನು
ಅಕ್ಷರಗಳನ್ನಾಗಿಸುವುದು
ಏರು ಹೃದಯ ಬಡಿತವನ್ನು
ಒಸರುವ ಕಣ್ಣೀರನ್ನು
ಸಾಲುಗಳನ್ನಾಗಿಸುವುದು
ಮತ್ತು
ಆ ಪ್ರೇಮಪತ್ರ ಬರೆದಾಗ ಸಹ
ನನ್ನ ಹೃದಯ ಅಕ್ಷರಗಳಾಗಿತ್ತು
ನಂತರ ಇವೇ ಸೊಟ್ಟ ಗೆರೆಗಳು
ನನ್ನ ಅಳಲನ್ನು ಬಿಂಬಿಸಿದ್ದವು
ಇವತ್ತು
ಈ ಅಕ್ಷರಗಳ ಮೇಲೆ ದೂಳಿದೆ
ನರೆತ ಕೂದಲಿನ ವ್ಯಕ್ತಿ
ಬಾಲ್ಯದ ಫೋಟೊ ನೋಡುವಂತೆ
ಚದುರಿದ ಅಕ್ಷರಗಳನ್ನು ನೋಡುತ್ತೇನೆ
ಇಲ್ಲ,
ಇವು ಬರಿಯ ಅಕ್ಷರಗಳಲ್ಲ
ಏಕೆಂದರೆ
ಈ ಜೋಡಣೆಗೊಂದು ಅರ್ಥವಿದೆ.
- ಚಾಮರಾಜ ಸವಡಿ
೨.
ಬರೆಯಬೇಕೆಂದರೆ...
ಕಾಗದ-ಪೆನ್ನೆತ್ತಿಕೊಂಡರೆ
ತಿಳಿಯಾಗಿದ್ದ ಮನಸ್ಸು
ಕಲಕಿಬಿಡುತ್ತದೆ
ಮುಸ್ಸಂಜೆ ಕಳೆದುಕೊಂಡ
ಗೋಲಿ ಹುಡುಕಿದಂತೆ
ಶಬ್ದ, ವಾಕ್ಯಗಳಿಗೆ ತಡಕಾಡುವೆ
ಇಲ್ಲೇ ಎಲ್ಲೋ ಇವೆ
ಆದರೆ ಎಲ್ಲಿವೆ? ಸಿಗಲೊಲ್ಲವು
ಪರಚಿಕೊಳ್ಳಬೇಕೆನಿಸುತ್ತದೆ
ಉಪಯೋಗವಿಲ್ಲ
ಮುನಿಯಂತೆ ಕೂತು
ನುಣುಚಿಕೊಳ್ಳುತ್ತಿರುವ
ಶಬ್ದ, ವಾಕ್ಯಗಳನ್ನು ಗಬಕ್ಕನೇ ಹಿಡಿದು
ಮಸಿಯಾಗಿ
ಕಾಗದದ ಮೇಲೆ ಕಾರಿಸಲೆತ್ನಿಸುತ್ತೇನೆ
ಕೆಲವು
ಒಳಗಿನದನ್ನೆಲ್ಲ ಕಾರಿಕೊಂಡರೆ
ಇನ್ನು ಕೆಲವು ಮಲ-ಮೂತ್ರ ಮಾಡುತ್ತವೆ
ಅಸಹ್ಯ
ಚಿತ್ರ ಕೆಟ್ಟು ನಾರುತ್ತದೆ
ಬೇಸರಗೊಂಡು
ಹಾಳೆ ಮುದುರಿ ಎಸೆದು
ಪೆನ್ನು ಬಿಸುಟು
ಛಾವಣಿ ನೋಡುತ್ತ ಕೂತಾಗ
ನುಣುಚಿಕೊಂಡು ಓಡಿದ್ದ ಶಬ್ದ-ವಾಕ್ಯಗಳು
ಬಿಳಿ ಛಾವಣಿ ಮೇಲೆ ಕುಣಿದು
ಚಂದದ ಚಿತ್ತಾರ ಬಿಡಿಸಿ
ಗೇಲಿ ಮಾಡುತ್ತವೆ.
- ಚಾಮರಾಜ ಸವಡಿ
೩.
ಮೊಗ್ಗರಳಿ...ಕವಿಶೈಲ
ಹತ್ತು ವರ್ಷದ ಹಿಂದೆ ನೋಡಿದ ಹುಡುಗಿ
ಅರ್ಧ ಲಂಗ, ಗಾಜಿನ ಬಳೆ, ಜಡೆ, ರಿಬ್ಬನ್ನು
ಖೋ ಖೋ, ಹಗ್ಗದಾಟ, ಕುಂಟೋ ಬಿಲ್ಲೆ
ಗಟ್ಟಿ ನಗು, ಕೇಕೆ, ಬಿಕ್ಕಳಿಕೆ
ಮೊನ್ನೆ ಮೊನ್ನೆ ಕಂಡಂತೆ
ಅಚ್ಚಳಿಯದ ನೆನಪು
ಈ ಹುಡುಗಿ
ಆಗ ಗೊಂದಲಕ್ಕೆ ಕೆಡವಿರಲಿಲ್ಲ
ಅವಳ ಆಟ, ನೋಟ
ಕಂಡಾಗೆಲ್ಲ ಕಣ್ಣು-ತುಟಿ ಅರಳಿಸುವುದು
ಏನೂ ಅನ್ನಿಸಿರಲಿಲ್ಲ
ಮೊನ್ನೆ
ಓಣಿಯ ತಿರುವಿನಲ್ಲಿ
ಆಕಸ್ಮಿಕವಾಗಿ ಕಂಡಾಗ
ಕತ್ತಲಲ್ಲಿ ಕೆಮ್ಮಣ್ಣುಗುಂಡಿ ತಲುಪಿ
ಬೆಳಿಗ್ಗೆ ಕಿಟಕಿ ತೆರೆದು ನೋಡಿದಾಗಿನ
ಬೆರಗು, ಖುಷಿ
ಇವಳೀಗ ಪ್ರಕೃತಿ
ಆಕರ್ಷಕ, ಗೂಢ
ದಟ್ಟವಾಗಿ ಬೆಳೆದ ಮಲೆನಾಡ ಕಾಡು
ನಾನೋ ಇನ್ನೂ ಎಳಸು
ಹುಡುಕಬೇಕು ಕವಿಶೈಲ
ಮಲೆಯ ನಡುವೆ
- ಚಾಮರಾಜ ಸವಡಿ
೪.
ಬಯಲು ಸೀಮೆಯ ಕನಸು
ಊರಿನಿಂದ
ಸಾವಿರಾರು ಮೈಲು ದೂರದಲ್ಲಿ
ಭಾರತ-ಪಾಕಿಸ್ತಾನದ ಗಡಿಯಲ್ಲಿ
ಉಸುಕು-ನೀರಿನ ಹಿನ್ನೆಲೆಯಲ್ಲಿ
ಬಿಸಿಲು ದಿಟ್ಟಿಸುತ್ತ ಕೂತ ನನಗೆ
ಬಯಲು ಸೀಮೆಯ ಕನಸು
ನಮ್ಮಜ್ಜ
’ಕಪಿಯೇ, ಮನುಷ್ಯನಾಗುವುದ ಕಲಿ’
ಎಂದು ಅಂಗೈಗೆ ಐದು ಪೈಸೆ ಹಾಕುತ್ತ
ಊರ ಸಂತೆಗೆ ಅರ್ಥ ತರಿಸಿದ್ದು
ಅಪ್ಪ ತಂದ ಪೇರಲ ಹಣ್ಣು
ಅವ್ವ ಹಚ್ಚಿದ ಕಾರಮಂಡಾಳ
ಐದು ಪೈಸೆ ತಂದಿತ್ತ
ಜಗತ್ತನ್ನೇ ಕೊಂಡೇನೆಂಬ ಆತ್ಮವಿಶ್ವಾಸ
ಎಲ್ಲಾ ನೆನಪಾಗಿ
ಎಲ್ಲೋ ದೂರದಲ್ಲಿ ಬರುತ್ತಿದ್ದ ಗಾಡಿ
ಎಬ್ಬಿಸಿದ ದೂಳಿನ ನಡುವೆ
ನಮ್ಮೂರ ಸಂತೆ ಕಂಡ ಹಾಗಾಗಿ
ಕಣ್ಣು ಮಂಜು ಮಂಜು
ಗದಗಿನವರೆಗೆ ಬಸ್ಸಲ್ಲಿ
ಹುಬ್ಬಳ್ಳಿಯಿಂದ ರೈಲು ಹತ್ತಿ
ಮುಂಬೈ ದಾಟಿ ಇಷ್ಟು ದೂರ ಬರುವ ಮೊದಲು
ನನ್ನ ಬಯಲು ಸೀಮೆ ಎಷ್ಟೊಂದು ಚಂದವಿತ್ತು
ಅಲ್ಲಿಯ ಜೋಗಪ್ಪ, ಜೋಗವ್ವ
ಪೀರಸಾಬನ ದರಗಾದ ಉರುಸು
ಸಿದ್ಧೇಶ್ವರನ ಜಾತ್ರೆ, ಬಯಲಾಟ
ಕಲಿತ ಕಳ್ಳ ನಾಟಕ, ಬಂಬೈ ಮಿಠಾಯ್
ದನದ ಜಾತ್ರೆ, ಹಂಪಿ ಪ್ರವಾಸ
ಬೆತ್ತಲೆ ಬಯಲಲ್ಲಿ ಬೆತ್ತಲೆ ಓಡಾಟ
ಅಯ್ಯೋ ತಾಳಲಾರೆ, ಕಳೆದು ಹೋದೇನು
ಗೆಳೆಯಾ ನನ್ನನ್ನೆಚ್ಚರಿಸು
ಬಯಲು ಸೀಮೆಯ ಕನಸು ನನಗೆ
- ಚಾಮರಾಜ ಸವಡಿ
೫.
ಸಂಬಂಧದಾಚೆಯವಳು
ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ
ಸೋದರಿಯಾಗಿಸಲ್ಪಟ್ಟ ಗೆಳತಿ
ಅವಳ ಚಟುವಟಿಕೆ, ಚುರುಕುತನ
ಯಾರೊಂದಿಗೋ ಸಿನಿಮಾದಲ್ಲಿ ಅವಳ ನೋಡಿ
ತಳಮಳಗೊಂಡಿದ್ದು, ಹೇಳಲಾರದ ನೋವುಂಡಿದ್ದು
ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ
ಎದೆ ತೆರೆಯಲು, ಮನಸ ಎಳೆ ಬಿಡಿಸಿಡಲು
ಒಳಗಿನದನ್ನೆಲ್ಲ ಹೊರ ಹಾಕಲು ಯತ್ನಿಸಿದರೂ
ಎದೆ ಭಾರವಾಗಿದ್ದು, ಮನದ ಎಳೆ ಗಂಟಾದದ್ದು
ಒಳಗಿನದೆಲ್ಲ ಒಳಗೇ ಉಳಿದಿದ್ದು, ನೋವಾಗಿ ಬೆಳೆದಿದ್ದು
ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ
ಅವಳ ಸಂಗ ಕಡಿಮೆ ಮಾಡಬೇಕು ಅಂದುಕೊಳ್ಳುತ್ತಾ
ಸೋತು ಸೋತು, ಪ್ರತಿ ರಜೆಗೆ ಹಾಜರಿ ಹಾಕಿ
ಅವಳ ತಮಾಷೆಗೆ ನಗದೇ, ಸುಮ್ಮನಿರಲೂ ಆಗದೇ
ಗೊಂದಲಗೊಂಡಿದ್ದು, ತೊಳಲಾಡಿದ್ದು
ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ
ಮಿಕ್ಕಿದ್ದೆಲ್ಲ ಇನ್ನೊಮ್ಮೆಗೆ ಅಂದುಕೊಂಡರೂ
ಡೈರಿಯಲ್ಲಿ, ಗೆಳೆಯನೆದುರು
ಅಪರಿಚಿತ ಯುವ ಕವಿಯೊಂದಿಗೆ
ಹೇಳಿಕೊಂಡಿದ್ದು, ಬಿಕ್ಕಿದ್ದು, ಮೌನಿಯಾಗಿದ್ದು
ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ
- ಚಾಮರಾಜ ಸವಡಿ
೬.
ಬೆದೆಗೊಂದು ಭಾಷ್ಯ
ಯಾವ ಸೊಗಸಿನ ಅಂಶಕ್ಕೆ
ವರ್ಷವೂ ಬೋಳು ಮರ ಚಿಗುರುವುದು
ಕಟ್ಟಿ ಹಾಕಿದ ನಾಯಿ ಜಗ್ಗಾಡುವುದು
ರಾತ್ರಿ ಕಡಲು ಮುಸುಗುಡುವುದು, ಅಪ್ಪಳಿಸುವುದು?
ಒಣಗಿ ಸೆಟೆದ ಕೊಂಬೆಗಳೂ
ಹಸಿರ ಮುಗುಳ್ನಗುವುದು, ಕೆಂಪಾಗಿ ನಾಚುವುದು
ಕರ್ರನ್ನ ದುಂಬಿಯ ಕೊರೆತಕ್ಕೆ
ಕೆರಳುವುದು, ಹಿತವಾಗಿ ನರಳುವುದು?
ಕೈಯೂರಿ ಎದ್ದು, ಕಾಲೂರಿ ಬಿದ್ದು, ಮತ್ತೇಕೆ
ಕೋಲೂರಿ ಆಯ ಕಾಯುವ ಕಾತರ?
ಪಡಿಯಚ್ಚುಗಳ ಮದುವೆಯಲಿ
ಸಾಲಸೋಲದ ಭೂರಿಭೋಜನ?
ಎಲ್ಲಾ ತುಡಿತಗಳಿಗೆ ಅರ್ಥ:
ಮಳೆಯಂತೆ ಬಿತ್ತಿ
ಭುವಿಯಂತೆ ಬೆಳೆಯುವುದು
ಪಡಿಯಚ್ಚುಗಳ ನೋಡಿ, ನಲಿದು
ಹಣ್ಣಾಗಿ ಅಳಿಯುವುದು
- ಚಾಮರಾಜ ಸವಡಿ
೭.
ಅಲ್ಲೆಲ್ಲ ಅವಳ ನೆನಪು
ದೊಡ್ಡ ಗೇಟು, ಮಹಡಿ ಮೆಟ್ಟಿಲು
ಲೈಬ್ರರಿಯ ಬಾಗಿಲು, ಪುಸ್ತಕದ ದೂಳಿನಲ್ಲಿ
ಆ ಸರಸ್ವತಿ ವಿಗ್ರಹ, ಆ ಪುಡಿ ಕುಂಕುಮದಲ್ಲಿ
ಗಾಳಿಯಲ್ಲಿ ಕರಗಿದ ಸುಗಂಧದಂತೆ
ಅಲ್ಲೆಲ್ಲ ಅವಳ ನೆನಪು
ಪುಸ್ತಕದ ಕೊನೆಯ ಪುಟದ ಸೀಲಿನಲ್ಲಿ
ಒಳಪುಟದಲ್ಲೆಲ್ಲೋ ಇಟ್ಟ ಗುರುತಿನ ರಟ್ಟಿನಲ್ಲಿ
ಕೆಳಗೆರೆ ಹೊಡೆದ ಸಾಲುಗಳಲ್ಲಿ
ಖಾಲಿ ಪುಟದ ರಂಗೋಲೆಯಲ್ಲಿ
ಅಲ್ಲೆಲ್ಲ ಅವಳ ನೆನಪು
ಇಂದವಳು ಬಂದಾಳೆಂಬ ನಿರೀಕ್ಷೆಯಲ್ಲಿ
ಬಂದೇಬಿಟ್ಟಳೆಂಬ ಸಡಗರದಲ್ಲಿ
ಅವಳನ್ನು ನೋಡುವ, ಮಾತಾಡಿಸುವ ತವಕದಲ್ಲಿ
ಸೋಲಿನ ನಿರಾಶೆಯಲ್ಲಿ, ನೋವಿನಲ್ಲಿ
ಅಲ್ಲೆಲ್ಲ ಅವಳ ನೆನಪು
ಗಂಟೆ ಐದಾಗಿ, ತರಗತಿಗಳು ಖಾಲಿಯಾಗಿ
ಕಾರಿಡಾರಿನಲ್ಲಿ ಕಾಲುಗಳು ಸರಿದಾಡಿ
ಕೊಠಡಿಗಳ ಬೀಗ ಹಾಕಿ, ಕಾರಿಡಾರಿನ ಲೈಟು ಹಾಕಿ
ಇವತ್ತು ಸತ್ತು, ನಾಳೆಯಿನ್ನೂ ದೂರವಿರುವಾಗ
ಅಲ್ಲೆಲ್ಲ ಅವಳ ನೆನಪು
- ಚಾಮರಾಜ ಸವಡಿ
೮.
ಮನಸು ಕರಗುವ ಹೊತ್ತು
ತಲೆದಡವಿ, ಮೈ ತಟ್ಟಿ, ಅಭಯ ನೀಡಿ
ರಾತ್ರಿಯೆಲ್ಲ ಹಿತ ನುಡಿದು
ಕೈಕೈ ಹಿಡಿದು ಮಾಡಿದ ಪಯಣ
ಬಸ್ಸಿನ ಕಂಬಿ ಹಿಡಿದು ಹಾಕಿದ ಕಣ್ಣೀರು
ಎಲ್ಲಾ ಅವನ ಬೆರಳ ಸ್ಪರ್ಶಕ್ಕೆ ಕರಗಿತೆ?
ಅಂದು ಅತ್ತಿದ್ದು, ಜಗತ್ತು ನಿಂದಿಸಿದ್ದು
ಊರಿಂದೂರಿಗೆ ನೆಮ್ಮದಿ ಅರಸಿ ಅಲೆದಿದ್ದು
ಆ ಮಳೆಯ ಹನಿಯಲ್ಲಿ ಹನಿಯಾಗಿ
ಆ ಬಿಸಿಲ ಬೇಗೆಯಲಿ ಬೆವರಾಗಿ
ಇನ್ನೆಂದೂ, ಎಂದೂ ಇಲ್ಲ ಅಂದ ನುಡಿ
ಇಂದವನ ಬೆರಳ ಸ್ಪರ್ಶಕ್ಕೆ ಕರಗಿತೆ?
ಬಂಗಾರದ ಕನಸ ಎಳೆಗೆ
ಮುತ್ತಿನ ನೆನಪು ಜೋಡಿಸಿ
ನೀ ನೇಯ್ದ ನವಿರು ವಸ್ತ್ರ ಬಿಟ್ಟು
ಹಾಲ್ಗಲ್ಲದ ಕಣ್ಣೀರ ಒರೆಸಿ
ತುಟಿಯೊಳಗಿನ ಬಿಕ್ಕದುಮಿ ಬಂದವಳು
ಇನ್ನೆಂದೂ ಕರಗೆನೆಂದವಳ ಕಲ್ಮನಸು
ಮತ್ತೆ ಅವನ ಬೆರಳ ಸ್ಪರ್ಶಕ್ಕೆ ಕರಗಿತೆ?
ಕರಗಲಿ ಬಿಡು ಹುಡುಗಿ ಕರಗುವ ವಸ್ತು ಪ್ರೀತಿ
ಕರಗಿ ಹೋದ ಬಳಿಕ ಮರುಗದಿರು ಮತ್ತೆ
ನಾನಿರುವೆ ಇಲ್ಲಿ ಹೀಗೇ ಹೇಗೋ
ಕರಗುತ್ತ, ಕೊರಗುತ್ತ
ಮತ್ತೆ ಮತ್ತೆ ನಿನ್ನ
ಮರೆಯಲೆತ್ನಿಸುತ್ತ
- ಚಾಮರಾಜ ಸವಡಿ
ದಾಟುವ ಮುನ್ನ ಜಾರುವ ಮನ
15 Apr 2008
ಎಫ್.ಎಂ. ಚಾನೆಲ್‌ಗಳು ಬಂದ ನಂತರ, ಕಾಯುವುದು ಒಂಚೂರಾದರೂ ಸಹನೀಯ. ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಂತೆ ಸಹಜವಾಗಿ ರೇಡಿಯೋ ಆನ್ ಆಗುತ್ತದೆ. ಬೀಗರನ್ನು ಸ್ವಾಗತಿಸಿದಂತೆ, ಅತ್ಯಂತ ಔಪಚಾರಿಕವಾಗಿ ಕಾರ್ಯಕ್ರಮ ನಿರೂಪಿಸುವ ಸರ್ಕಾರಿ ಎಫ್.ಎಂ. ರೇನ್‌ಬೋ, ಅರಳು ಹುರಿದಂತೆ ಪಟಪಟ ಮಾತನಾಡುವ ಖಾಸಗಿ ಎಫ್.ಎಂ. ರೇಡಿಯೋ ಜಾಕಿಗಳು, ರೇಡಿಯೋದಲ್ಲಿ ಮಾತನಾಡಿದೆವೆಲ್ಲ ಎಂಬ ಸಂಭ್ರಮದಲ್ಲಿ ಬೀಗುವ ಪೆದ್ದು ಗೃಹಿಣಿಯರು, ಮೊದ್ದು ಗಂಡಸರು, ಒಂದು ಹಾಡಿಗಾಗಿ ಖಾಸಗಿ ಬದುಕಿನ ಸೂಕ್ಷ್ಮ ಸಂಗತಿಗಳನ್ನೆಲ್ಲ ಒದರುವ ಅವಿವೇಕಿ ಕೇಳುಗರು, ಇವುಗಳ ನಡುವೆ ಮೂಡಿ ಬರುವ ಸೊಗಸಾದ ಹಾಡುಗಳು, ಜೋಕ್‌ಗಳು-
ಕೇಳುತ್ತ ಕೇಳುತ್ತ ಮನಸ್ಸು ಎಲ್ಲೋ ಜಾರುತ್ತ ಹೋಗುತ್ತದೆ.
ಸಿಟಿ ಬಸ್‌ನಲ್ಲಿ ಸೀಟ್ ಸಿಕ್ಕಿದ್ದರೆ ಈ ಮಜಾ ಇನ್ನೂ ಹೆಚ್ಚು. ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು, ಮಜವಾಗಿ ಹಾಡು ಕೇಳುತ್ತಿದ್ದಾಗ, ಅಲ್ಲೆಲ್ಲೂ ದೂರ ಸಿಗ್ನಲ್ ಹಸಿರಾಗುತ್ತದೆ. ಹಾಗಂತ ಬಸ್ಸೇನೂ ತಕ್ಷಣ ಚಲಿಸುವುದಿಲ್ಲ. ಭಯಂಕರವಾಗಿ ಆರ್ಭಟಿಸಿ ಹೊಗೆ ಉಗುಳುತ್ತ, ಜಗಳಕ್ಕೆ ಸಿದ್ಧವಾದ ಗೂಳಿಯಂತೆ ಗುಟುರು ಹಾಕುತ್ತ, ಅವಕಾಶ ಸಿಕ್ಕ ಕೂಡಲೇ ಮುಂದೆ ಹೋಗಲು ಸಿದ್ಧವಾಗುತ್ತದೆ.
ಎದುರಾ ಬದುರಾ ಇರುವ ಟ್ರಾಫಿಕ್ ಹೋಗಲೋ ಬೇಡವೋ ಎಂಬಂತೆ ನಿಧಾನವಾಗಿ ಚಲಿಸಲು ಪ್ರಾರಂಭಿಸುತ್ತದೆ. ಎರಡನೇ ಗೇರ್ ಹಾಕಬೇಕೆನ್ನುವಷ್ಟರಲ್ಲಿ ಮತ್ತೆ ಟ್ರಾಫಿಕ್ ಜಾಮ್! ನಮ್ಮ ಬಸ್ ಹತ್ತು ಹೆಜ್ಜೆ ಮುಂದೆ ಹೋಗಿರುತ್ತದೆ. ಎದುರುಗಡೆಯಿಂದ ಒಂದು ಬಸ್ ಹತ್ತು ಹೆಜ್ಜೆ ನಮ್ಮತ್ತ ಬಂದಿರುತ್ತದೆ. ಕಿಟಕಿಗಳ ಪಕ್ಕ ಕಿಟಕಿಗಳು. ನಡುವೆ ಇದೆಯೋ ಇಲ್ಲವೋ ಎಂಬಂಥ ರಸ್ತೆ ವಿಭಜಕ. ಕೈ ಚಾಚಿದರೆ ಆ ಕಡೆಯ ಕಿಟಕಿಯನ್ನು ಸುಲಭವಾಗಿ ತಲುಪಬಹುದು.
ಆಗ ಶುರುವಾಗುತ್ತದೆ ನೂರಾರು ಭಾವನೆಗಳ ತಾಕಲಾಟ.
ಕಿಟಕಿಯ ಪಕ್ಕ ಕೂತವರಿಗೆ ಇತ್ತ ನೋಡಲು ಮುಜುಗರ. ಅಲ್ಲೆಲ್ಲೋ ಮಧ್ಯವಯಸ್ಕ ಪೋತಲನೊಬ್ಬ ನಮ್ಮ ಬಸ್‌ನಲ್ಲಿ ಕೂತಿದ್ದ ಹುಡುಗಿಯನ್ನು ನುಂಗುವಂತೆ ನೋಡುತ್ತಿರುತ್ತಾನೆ. ಆಂಟಿಗೆ ಜೀನ್ಸ್ ಹುಡುಗನ ಮೇಲೆ ಕಣ್ಣು. ಅದುವರೆಗೆ ಕಿಟಕಿಯಾಚೆಗೇ ಕಣ್ಣು ನೆಟ್ಟು ಕೂತಿದ್ದ ಹುಡುಗಿಯರು ಇದ್ದಕ್ಕಿದ್ದಂತೆ ಪ್ರಜ್ವಾವಂತೆಯರಾಗಿದ್ದಾರೆ. ಮೊಬೈಲ್‌ನತ್ತ, ಇಲ್ಲವೇ ಟಿವಿ ಪರದೆ ದಿಟ್ಟಿಸುತ್ತಿದ್ದಾರೋ ಎನ್ನುವಂತೆ ಬಿಟ್ಟ ಕಣ್ಣುಗಳಿಂದ ಎದುರು ಸೀಟ್ ನೋಡುವುದರಲ್ಲಿ ನಿರತರಾಗಿದ್ದಾರೆ.
ಇದಪ್ಪ ಸೀನ್ ಎಂದರೆ! ಪಕ್ಕದ ಬಸ್‌ನ ಕಿಟಕಿಯತ್ತ ಮನಸ್ಸು ಸೆಳೆಯುತ್ತಿದ್ದರೂ ಕಣ್ಣು ಹೊರಳಿಸಲು ಏನೋ ಸಂಕೋಚ. ಎಂಥದೋ ಬಿಗುಮಾನ. ಇದ್ದಕ್ಕಿದ್ದಂತೆ ಪಕ್ಕದ ಬಸ್‌ನಲ್ಲಿ ಗುಮ್ಮ ಬಂದಿದೆಯೇನೋ ಎಂಬಂತೆ ಎಲ್ಲ ಮುಗುಮ್ಮಾಗಿದ್ದಾರೆ. ಅಂಥದೇ ಸಂದಿಗ್ಧ ನಮ್ಮ ಬಸ್‌ನಲ್ಲಿ ಕೂತವರಲ್ಲೂ. ನೋಡಲೂ ಆಗದ, ನೋಡದೇ ಇರಲೂ ಆಗದ ಮನಃಸ್ಥಿತಿ. ಆದರೂ ಆಸೆಬುರುಕ ಮನಸ್ಸು ಕಣ್ಣು ಹೊರಳಿಸುತ್ತದೆ.
ಅಲ್ಲೇನಿದೆ?
ಮೊಬೈಲ್ ಕೈಲಿ ಹಿಡಿದವರು, ಕಾಣದ ಪರದೆ ನೋಡುತ್ತ ಕೂತವರು, ಕೆಕ್ಕರಿಸುವ ಆಂಟಿಯರು, ಶಪಿಸುವ ಅಜ್ಜಿಯರು, ಹೆಣ್ಣೇ ಕಾಣದ ಅಂಕಲ್ ಗಾವಿಲರು- ದೇವರೇ, ಬೇಗ ಬಸ್ ಚಲಿಸಲಪ್ಪಾ ಎಂದು ಮನಸ್ಸು ಹಾರೈಸುವಾಗ ರೇಡಿಯೋದಲ್ಲಿ ಹಾಡು: ’ಜಿಂಕೆ ಮರೀನಾ, ಜಿಂಕೆ ಮರೀನಾ...’
ಅದನ್ನು ತಾನೂ ಕೇಳಿಸಿಕೊಂಡಿತೇನೋ ಎಂಬಂತೆ ಬಸ್ ಜಿಂಕೆ ಮರಿಯಂತೆ ನಡೆಯದಿದ್ದರೂ ಗಜ ಗಮನೆಯಾಗಿ ಚಲಿಸಲು ಪ್ರಾರಂಭಿಸುತ್ತದೆ. ಪಕ್ಕದ ಬಸ್‌ನ ಸಕಲ ಸೌಂದರ್ಯ, ಕುರೂಪ, ವಿಕ್ಷಿಪ್ತಗಳೆಲ್ಲ ನಿಧಾನವಾಗಿ, ಮನದಾಚೆಗೇನೋ ಎಂಬಂತೆ ಸರಿದು ಹೋಗುತ್ತವೆ. ಮತ್ತೆ ಮುಂದಿನ ಸಿಗ್ನಲ್‌ನಲ್ಲಿ ಇಂಥದೇ ಮತ್ತೊಂದು ಸೀನ್. ಅಲ್ಲೇನು ’ಜಿಂಕೆ ಮರಿ’ ಸಿಗುತ್ತದೋ, ’ಜಲಜಲ ಜಲಜಾಕ್ಷಿ’ ಸಿಗುತ್ತಾಳೋ, ’ಮಿನ ಮಿನ ಮೀನಾಕ್ಷಿ’ ಕಾಣಿಸುತ್ತಾಳೋ- ಅದು ಟ್ರಾಫಿಕ್ ಮಹಾತ್ಮೆಯ ಮರ್ಜಿ.
ಆದರೆ, ಬದುಕು ಮಾತ್ರ ಸಿಗ್ನಲ್‌ನಿಂದ ಸಿಗ್ನಲ್‌ಗೆ ಕೆಂಪಾಗುತ್ತ ಹಸಿರಾಗುತ್ತ, ಯಾವುದೋ ಕನಸನ್ನು ಧೇನಿಸುತ್ತ, ಅದು ನನಸಾಗಲಿ ಎಂದು ಹಾರೈಸುತ್ತ ಹೋಗುತ್ತದೆ. ಪ್ರಯಾಣದ ಚಿಕ್ಕ ಅವಧಿಯನ್ನು ಸ್ಮರಣೀಯವಾಗಿಸುತ್ತದೆ.
- ಚಾಮರಾಜ ಸವಡಿ
ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
14 Apr 2008
ಒಮ್ಮೊಮ್ಮೆ ಶಬ್ದವೊಂದು ಮನಸ್ಸನ್ನು ಆವರಿಸಿಕೊಳ್ಳುವ ರೀತಿ ಕಂಡು ಅಚ್ಚರಿಯಾಗುತ್ತದೆ.
ಇಂಗ್ಲಿಷ್‌ನಲ್ಲಿ ಹಿಪಾಕ್ರಸಿ ಎಂಬ ಶಬ್ದವಿದೆ. ಕನ್ನಡದಲ್ಲಿ ಅದಕ್ಕೆ ಆಷಾಡಭೂತಿ ಎಂಬ ಅಧ್ವಾನದ ಹೆಸರಿದೆ. ಹಾಗಂದರೇನು ಎಂದು ತಕ್ಷಣಕ್ಕೆ ಗೊತ್ತಾಗದಿದ್ದರೆ ಹುಸಿವಾದ ಎಂತಲೋ, ಡಾಂಭಿಕತೆ ಎಂದೋ ಅರ್ಥ ಮಾಡಿಕೊಳ್ಳಬಹುದು. ಒಂದು ಉದಾಹರಣೆ ಮೂಲಕ, ಈ ಶಬ್ದದ ಅರ್ಥ ಹಾಗೂ ನಮ್ಮ ಅನೇಕ ಬುದ್ಧಿಜೀವಿಗಳ ಗೊಡ್ಡುತನವನ್ನು ನಿಮ್ಮ ಮುಂದಿಡಲು ಯತ್ನಿಸುತ್ತೇನೆ.
ಕರ್ನಾಟಕ-ಭಾರತ ಬಿಡಿ, ಜಗತ್ತಿನ ಯಾವುದೇ ಭಾಗದಲ್ಲಿ ಹಿಂದುಗಳಲ್ಲದವರ ಮೇಲೆ, ಮುಖ್ಯವಾಗಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರ ಮೇಲೆ ಹಲ್ಲೆಗಳಾಗಲಿ, ಅನ್ಯಾಯದ ಘಟನೆಗಳು ನಡೆಯಲಿ, ಕೋಮು ಸೌಹಾರ್ದ ಹೆಸರಿನ ಸಂಘಟನೆಗಳಿಗೆ ಜೀವ ಬಂದುಬಿಡುತ್ತದೆ. ಅವರು ನೀಡುವ ಪತ್ರಿಕಾ ಪ್ರಕಟಣೆಗಳೋ, ನಡೆಸುವ ಪತ್ರಿಕಾಗೋಷ್ಠಿಗಳೋ, ಹಮ್ಮಿಕೊಳ್ಳುವ ವಿಚಾರಗೋಷ್ಠಿಗಳೋ- ಅಬ್ಬಬ್ಬಾ ಒಂದಕ್ಕಿಂತ ಒಂದು ಭೀಕರ. ಜಗತ್ತಿನಲ್ಲಿ ಇದಕ್ಕಿಂತ ಕೆಟ್ಟದ್ದು ಇನ್ಯಾವುದೂ ಇರಲಿಕ್ಕಿಲ್ಲ ಎನ್ನುವಂತೆ, ಹೊಟ್ಟೆಯಲ್ಲಿ ಹುಟ್ಟಿದವರಿಗೇ ತೊಂದರೆಯಾಯಿತೇನೋ ಎಂಬಂತೆ ಶಾಬ್ದಿಕ ಅನುಕಂಪ ಹರಿಸಿದ್ದೇ ಹರಿಸಿದ್ದು, ಭಾಷಣ ವ್ಯಭೀಚಾರ ಎಸಗಿದ್ದೇ ಎಸಗಿದ್ದು.
ಇದನ್ನೇಕೆ ವ್ಯಭೀಚಾರಕ್ಕೆ ಹೋಲಿಸುತ್ತಿದ್ದೇನೆಂದರೆ, ಒಂದು ವೇಳೆ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಇತರ ಧರ್ಮೀಯರ ಮೇಲೆ ದಾಳಿ ಮಾಡಿದ್ದರೆ ಇವರ ಕಾಳಜಿ ಕಾಣುವುದಿಲ್ಲವಾದ್ದರಿಂದ. ಉದಾಹರಣೆಗೆ ನೋಡಿ, ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ ಹಾಗೂ ಎಸಗಲು ಹೊಂಚು ಹಾಕುತ್ತಿದ್ದ ಸಾಲು ಸಾಲು ಉಗ್ರರನ್ನು ಪೊಲೀಸರು ಬಂಧಿಸಿದಾಗ, ಕೋಮು ಸೌಹಾರ್ದ ವೇದಿಕೆ ಕತ್ತೆ ಮೇಯಿಸಲು ಹೋಗಿತ್ತೇನೋ. ಧಾರ್ಮಿಕ ಅಲ್ಪಸಂಖ್ಯಾತರ ಪರ ಎಂದು ಘೋಷಣೆ ಕೂಗುವ ಈ ನಾಯಕ-ನಾಯಕಿಯರು ತುಟಿ ಬಿಚ್ಚದೇ ಸುಮ್ಮನೇ ಕೂತಿದ್ದರು.
ಏಕೆ?
ಏಕೆಂದರೆ, ಹಿಂದುಗಳ ಪರ ನಿಲ್ಲುವುದಕ್ಕೆ ಅವರಿಗೆ ನಾಚಿಕೆ. ತಪ್ಪು ಯಾರೇ ಮಾಡಲಿ, ಅದು ಖಂಡನಾರ್ಹ ಎಂಬ ನಿಲುವು ತಳೆಯಲು ನಿಜವಾದ ಆದರ್ಶದ, ಸಚ್ಚಾರಿತ್ಯ್ರದ ಕೊರತೆ. ಹೇಗಿದ್ದರೂ ಹಿಂದುಗಳ ಪರ ನಿಲ್ಲಲು ಬಿಜೆಪಿ ಇದೆ. ಹಿಂದು ಪರ ಸಂಘಟನೆಗಳಿವೆ. ಅವರಿಗೆ ಎದುರಾಗಿ ನಿಂತರೆ ಬಿಟ್ಟಿ ಪ್ರಚಾರ ಸಿಗುವ ಖಾತರಿ ಇರುವುದರಿಂದ ಕೋಮು ಸೌಹಾರ್ದತೆ ಭಾಷಣಗಳು, ಭಾಷಣ ವ್ಯಭೀಚಾರಿಗಳು ಹುಟ್ಟಿಕೊಂಡಿದ್ದಾರೆ.
ಇವರಲ್ಲಿ ಬಹುತೇಕ ಜನ ಹುಸಿ ಆದರ್ಶವಾದಿಗಳು. ಢೋಂಗಿಗಳು. ಸರಿಯಾಗಿ ಹೇಳಬೇಕೆಂದರೆ ಆಷಾಡಭೂತಿಗಳು. ಕೂಗಾಡಲು ವಿಷಯ ಇಲ್ಲದ ದಿನಗಳಲ್ಲಿ ಅವರ ಚಟುವಟಿಕೆ ನೋಡಿದರೆ ಸಾಕು, ಸತ್ಯ ಗೊತ್ತಾಗುತ್ತದೆ. ಅದೂ ಬೇಡ, ಅವರು ಕೆಲಸ ಮಾಡುವಲ್ಲಿ, ವಾಸಿಸುವಲ್ಲಿ ಒಂದೆರಡು ಗಂಟೆ ಇದ್ದರೆ ಸಾಕು, ಆಷಾಡಭೂತಿತನ ಅಥವಾ ಹಿಪಾಕ್ರಸಿ ಎಂಬ ಶಬ್ದಕ್ಕೆ ಸಜೀವ ಅರ್ಥ ಸಿಕ್ಕಿಬಿಡುತ್ತದೆ.
ಇಂಥ ನೀಚ-ನೀಚೆಯರಿಂದಾಗಿ ಕೋಮುವಾದ ಹಾಗೂ ಕೋಮು ಸೌಹಾರ್ದ ಶಬ್ದಗಳೆರಡೂ ನಿಜಾರ್ಥ ಕಳೆದುಕೊಂಡಿವೆ. ಒಂದು ವರ್ಗದ ಜನರನ್ನು ತಿರಸ್ಕರಿಸುತ್ತ, ಇನ್ನೊಂದು ವರ್ಗದವರನ್ನು ಓಲೈಸುವ ಮೂಲಕ ಪ್ರಚಾರ ಪಡೆಯಲು ಈ ಜನ ಯತ್ನಿಸುತ್ತಿದ್ದಾರೆ. ಇಂಥ ಆಷಾಡಭೂತಿಗಳಿಗೂ ಹಾಗೂ ಇದೇ ಕೆಲಸವನ್ನು ನಿರ್ಲಜ್ಜವಾಗಿ ಮಾಡುತ್ತಿರುವ ಹಿಂದು ಪರ ಸಂಘಟನೆಗಳಿಗೂ ಏನೂ ವ್ಯತ್ಯಾಸವಿಲ್ಲ.
ಎರಡೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಂಟಿಕೊಂಡ ವ್ರಣಗಳೇ!
- ಚಾಮರಾಜ ಸವಡಿ
ಕತ್ತೆ=ಕುದುರೆ=ಸಮಾನತೆ
11 Apr 2008
ವಾಸ್ತವ ಅದಕ್ಕಿಂತ ಹೆಚ್ಚು ತಮಾಷೆಯಾಗಿರುತ್ತದೆ. ಅಷ್ಟೇ ಅಲ್ಲ, ಅನೇಕ ಸಾರಿ ದುರಂತವೂ ಆಗಿರುತ್ತದೆ.
ಒಂದು ಕತೆ ಕೇಳಿ. ಕಂಪನಿಯೊಂದರಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಇದ್ದವು. ಸುದ್ದಿ ತಿಳಿಯುತ್ತಲೇ ಕುದುರೆಗಳು ಅರ್ಜಿ ಹಾಕಿದವು. ಸ್ವಲ್ಪ ದಿನಗಳ ನಂತರ ಸಂದರ್ಶನಕ್ಕೆ ಕರೆ ಬಂದಿತು.
ಅಲ್ಲಿ ನೋಡಿದರೆ, ಕತ್ತೆಗಳು ಕೂಡ ಸಂದರ್ಶನಕ್ಕೆ ಬಂದಿವೆ! ಆಘಾತಗೊಂಡ ಕುದುರೆಗಳು ಪ್ರಶ್ನಿಸಿದವು, ’ಈ ಹುದ್ದೆಗಳನ್ನು ಕುದುರೆಗಳು ಮಾತ್ರ ನಿಭಾಯಿಸಬಲ್ಲವು. ಅದ್ಹೇಗೆ ನೀವು ಸಂದರ್ಶನಕ್ಕೆ ಬಂದಿದ್ದೀರಿ?’
ಕತ್ತೆಗಳು ಹೆಮ್ಮೆಯಿಂದಲೇ ಇಂಟರ್‌ವ್ಯೂ ಕಾರ್ಡ್ ತೋರಿಸಿದವು. ಅನುಮಾನವೇ ಇಲ್ಲ, ಕತ್ತೆಗಳನ್ನು ಅಧಿಕೃತವಾಗಿಯೇ ಸಂದರ್ಶನಕ್ಕೆ ಕರೆಯಲಾಗಿತ್ತು.
ಸ್ವಲ್ಪ ಹೊತ್ತಿನ ನಂತರ ಸಂದರ್ಶನ ಪ್ರಾರಂಭವಾಯಿತು. ಒಂದು ಕತ್ತೆಯ ನಂತರ ಒಂದು ಕುದುರೆಯನ್ನು ಕರೆಯಲಾಗುತ್ತಿತ್ತು. ಕತ್ತೆಗಳ ಜೊತೆ ಗುರುತಿಸಿಕೊಳ್ಳಬೇಕಲ್ಲ ಎಂಬ ಮುಜುಗರದಿಂದಲೇ ಕುದುರೆಗಳು ಸಂದರ್ಶನ ಮುಗಿಸಿದವು. ಕತ್ತೆಗಳಿಗೆ ಮಾತ್ರ ಹೆಮ್ಮೆಯೋ ಹೆಮ್ಮೆ.
ಸ್ವಲ್ಪ ದಿನಗಳ ನಂತರ ನೇಮಕಾತಿ ಆದೇಶಗಳು ಬಂದವು. ಕುದುರೆಗಳಿಗೆ ಸಂತಸ. ’ಪರವಾಗಿಲ್ಲ, ಕತ್ತೆಗಳೊಂದಿಗೆ ಸಂದರ್ಶನ ನೀಡಬೇಕಾಗಿ ಬಂದರೂ ಕೆಲಸ ಸಿಕ್ಕಿತಲ್ಲ’ ಎಂದು ಖುಷಿಯಿಂದಲೇ ಕಚೇರಿಗೆ ಹೋದವು.
ಅಲ್ಲಿ ಆಘಾತ ಕಾಯ್ದಿತ್ತು. ಕತ್ತೆಗಳು ಕೂಡ ಕೆಲಸಕ್ಕೆ ಹಾಜರಾಗಲು ಬಂದಿವೆ! ಅವಕ್ಕೂ ಅಪಾಯಿಂಟ್‌ಮೆಂಟ್ ಆರ್ಡರ್ ಸಿಕ್ಕಿದ್ದವು!
ಕುದುರೆಗಳಿಗೆ ಮತ್ತೆ ಮುಜುಗರ ಪ್ರಾರಂಭವಾಯಿತು. ಬಾಸ್‌ನನ್ನು ಕಂಡು ತಮ್ಮ ಭಾವನೆಗಳನ್ನು ವಿವರಿಸಿದವು: ’ಸರ್, ನಾವು ಕುದುರೆಗಳು. ನಾವು ಉತ್ತಮರು ಎಂಬ ಭಾವನೆಗಲ್ಲ, ನಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯೇ ಬೇರೆ. ಅದಕ್ಕೆ ತಕ್ಕ ಕೆಲಸ ಕೊಡಿ. ಕತ್ತೆಗಳೊಂದಿಗೆ ನಮ್ಮನ್ನು ಸಮೀಕರಿಸಬೇಡಿ.’
ಆದರೆ ಬಾಸ್ ಅವುಗಳ ವಾದ ಒಪ್ಪಲಿಲ್ಲ. ’ಇದು ಸಮಾನತೆಯ ಕಾಲ. ಕುದುರೆಗಳಿಗೆ ದೊರೆಯುವ ಎಲ್ಲ ಅವಕಾಶಗಳು ಕತ್ತೆಗಳಿಗೂ ದೊರೆಯಲಿವೆ. ನೀವು ಅವುಗಳ ಜೊತೆಗೇ ಕೆಲಸ ಮಾಡಬೇಕು. ಯಾರು ಚೆನ್ನಾಗಿ ಕೆಲಸ ಮಾಡುತ್ತಾರೋ ಅವರಿಗೆ ಮನ್ನಣೆ ಖಂಡಿತ ದೊರೆಯುತ್ತದೆ.’
ಕುದುರೆಗಳಿಗೆ ಅಸಮಾಧಾನವಾದರೂ ಅನಿವಾರ್ಯವಾಗಿ ಸುಮ್ಮನಾದವು. ಕೆಲಸ ಪ್ರಾರಂಭವಾಯಿತು. ಕ್ರಮೇಣ ಕತ್ತೆ ಹಾಗೂ ಕುದುರೆಗಳಿಗೆ ಇರುವ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗಲು ಶುರುವಾಯಿತು. ಕುದುರೆಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಕಠಿಣ ಕೆಲಸವನ್ನು ಹಗುರವಾಗಿ ಮಾಡಿ ಮುಗಿಸುತ್ತಿದ್ದವು. ಆದರೆ ಕತ್ತೆಗಳಿಗೆ ಅಂಥ ಸೂಕ್ಷ್ಮ ಇರಲಿಲ್ಲ. ದೊಡ್ಡ ಸಾಮರ್ಥ್ಯದ ಕೆಲಸಗಳನ್ನು ಮಾಡಲು ಅವಕ್ಕೆ ಸಾಧ್ಯವಾಗುತ್ತಲೂ ಇರಲಿಲ್ಲ.
ಹಾಗಂತ ಕೆಲಸ ಬಿಟ್ಟು ಕೊಡಲೂ ಅವು ತಯಾರಿರಲಿಲ್ಲ. ’ನಾವೂ ನಿಮ್ಮಂತೇ ಸಮಾನರು. ನಮ್ಮಿಬ್ಬರ ಗ್ರೇಡ್ ಒಂದೇ. ಸಂಬಳ ಒಂದೇ. ಕೆಲಸ ಒಂದೇ. ಸ್ವಲ್ಪ ಕಡಿಮೆ ಗುಣಮಟ್ಟ ಬಂದರೇನಂತೆ, ಸಹಿಸಿಕೊಳ್ಳಬೇಕಪ್ಪ’ ಎಂದು ವಾದಿಸಿದವು.
ಸ್ವಲ್ಪ ದಿನ ಹೀಗೇ ನಡೆಯಿತು. ಕಚೇರಿಗೆ ಬಂದವರು ಕತ್ತೆಗಳ ಜೊತೆ ಕುದುರೆಗಳು ಕೆಲಸ ಮಾಡುತ್ತಿದ್ದುದನ್ನು ಕಂಡು ತಮಾಷೆ ಮಾಡಿದರು. ಎಷ್ಟೋ ಸಾರಿ, ಕತ್ತೆಗಳ ಕಳಪೆ ಕೆಲಸದ ಜವಾಬ್ದಾರಿಯನ್ನು ಕುದುರೆಗಳೂ ಹೊರಬೇಕಾಗಿ ಬಂದಿತು. ಆದರೆ, ’ಸಮಾನತೆ’ ವಾದ ಮುಂದೊಡ್ಡಿ ಅದನ್ನೆಲ್ಲ ಸಮರ್ಥಿಸಲಾಯಿತು.
ಇದೆಲ್ಲ ಅತಿರೇಕವಾಯಿತು ಅನ್ನಿಸಿದಾಗ ಕುದುರೆಗಳಲ್ಲಿ ಕೆಲವು ಮತ್ತೆ ಬಾಸ್ ಕಂಡು ತಮ್ಮ ಅಳಲು ತೋಡಿಕೊಂಡವು. ಕತ್ತೆಗಳ ಜೊತೆ ಇದ್ದರೆ ನಮ್ಮ ಕೆಲಸದ ಮಹತ್ವ ಗೊತ್ತಾಗುವುದಿಲ್ಲ. ಕೆಲಸವನ್ನು ಕಳಪೆಯಾಗಿ ಹಾಗೂ ಕಡಿಮೆ ಪ್ರಮಾಣದಲ್ಲಿ ಮಾಡಿದರು ಕೂಡ ಅವು ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳುತ್ತವೆ. ಅದರ ಬದಲು, ಕತ್ತೆ ಚೆನ್ನಾಗಿ ಮಾಡಬಹುದಾದ ಕೆಲಸವನ್ನು ಕತ್ತೆಗೆ ಕೊಡಿ, ಕುದುರೆಗಳು ಚೆನ್ನಾಗಿ ಮಾಡುವ ಕೆಲಸವನ್ನು ಕುದುರೆಗಳು ಮಾಡಲಿ. ಒಂದೇ ಕಚೇರಿಯಲ್ಲಿದ್ದರೂ ಸರಿ, ಅವರವರ ಸಾಮರ್ಥ್ಯಕ್ಕೆ ತಕ್ಕ ಕೆಲಸವನ್ನು ಹಂಚಿಕೊಡಿ ಎಂದು ವಿನಂತಿಸಿಕೊಂಡವು.
ಆದರೆ ಬಾಸ್ ಕೇಳಲಿಲ್ಲ. ’ನಮ್ಮ ಪಾಲಿಸಿಯೇ ಹಾಗಿದೆ. ಸಮಾನತೆ ನಮ್ಮ ಮಂತ್ರ. ಕತ್ತೆಗಳು ಮೂಲತಃ ಕುದುರೆಗಿಂತ ಕಡಿಮೆ ದರ್ಜೆಯದು ಎಂದು ನಮಗೆ ಗೊತ್ತಿದೆ. ಅವುಗಳ ಸಾಮರ್ಥ್ಯ ಹೆಚ್ಚಿಸಲು ತುಂಬ ಸಮಯ ಹಾಗೂ ಹಣ ಬೇಕಾಗುತ್ತದೆ. ಅದು ನಮ್ಮಿಂದ ಸಾಧ್ಯವಿಲ್ಲ. ಹಾಗಂತ ಕೇವಲ ಕುದುರೆಗಳನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲು ಆಗದು. ಆದ್ದರಿಂದಲೇ ಕತ್ತೆ ಮತ್ತು ಕುದುರೆಗಳನ್ನು ಒಟ್ಟೊಟ್ಟಿಗೇ ಕೆಲಸಕ್ಕೆ ತೆಗೆದುಕೊಂಡಿದ್ದೇವೆ’ ಎಂದು ವಿವರಿಸಿದರು.
’ಆದರೆ, ಇದರಿಂದ ಕೆಲಸದ ಗುಣಮಟ್ಟ ಹೇಗೆ ಸಾಧ್ಯವಾಗುತ್ತದೆ ಸರ್?’ ಎಂದವು ಕುದುರೆಗಳು.
’ಸಿಂಪಲ್. ಕುದುರೆಗಳ ಜೊತೆ ಇರುವುದರಿಂದ ಕತ್ತೆಗಳು ತಮ್ಮ ಕೀಳರಿಮೆ ಕಳೆದುಕೊಂಡು, ತಾವೂ ಕುದುರೆಗಳಿಗೆ ಸರಿ ಸಮ ಎಂದು ಹೆಮ್ಮೆ ಪಡುತ್ತವೆ. ಇನ್ನೊಂದೆಡೆ, ಕತ್ತೆಗಳ ಜೊತೆ ಇರುವುದರಿಂದ ಕುದುರೆಗಳಲ್ಲಿ ಕೀಳರಿಮೆ ಉಂಟಾಗಿ, ಅವು ಕತ್ತೆಗಳ ಮಟ್ಟಕ್ಕೆ ಇಳಿಯುತ್ತವೆ. ಇದರಿಂದ ಇಡೀ ಕಚೇರಿಯಲ್ಲಿ ಒಂದೇ ಮಟ್ಟದ ವರ್ಕ್ ಫೋರ್ಸ್ ಸೃಷ್ಟಿಯಾಗುತ್ತದೆ. ಹೇಗಿದೆ ಐಡಿಯಾ?’, ಕೇಳಿದರು ಬಾಸ್.
ನೀತಿ: ಅಂದಿನಿಂದ ಬಹುತೇಕ ಕಚೇರಿಗಳಲ್ಲಿ ಕುದುರೆಗಳ ಜೊತೆ ಜೊತೆ ಕತ್ತೆಗಳೂ ಸಮನಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಯಿತು. ಸಾಮಾಜಿಕ ನ್ಯಾಯದಂತೆ ಇದೂ ಒಂಥರಾ ಬೌದ್ಧಿಕ ನ್ಯಾಯ.
ಅನುಮಾನ ಬಂದರೆ, ನೀವು ಕೆಲಸ ಮಾಡುತ್ತಿರುವ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.
- ಚಾಮರಾಜ ಸವಡಿ
(ಪ್ರೇರಣೆ: ಒನ್ ನೈಟ್ @ ಕಾಲ್ ಸೆಂಟರ್)
ಕಚೇರಿ ಎಂದರೆ ಸುಮ್ಮನೇನಾ?
9 Apr 2008
ಹಾಗಂದರೆ, ಅಲ್ಲಿ ಎಲ್ಲವೂ ಉಂಟು ಎಂದರ್ಥ. ಒಳ್ಳೆಯವರು, ಕೆಟ್ಟವರು, ಕೆಲಸಗಾರರು, ಸೋಮಾರಿಗಳು, ಶೂನ್ಯ ಪ್ರತಿಭೆಗಳು, ಮೊದ್ದುಮಣಿಗಳು, ಪೆದ್ದು ಮುಂಡೆಯರು- ಹೀಗೆ ಎಲ್ಲರೂ ಇರುತ್ತಾರೆ. ಕೆಲವರು ಕೆಲಸ ಮಾಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಇನ್ನು ಕೆಲವರು ಹಾಗೇ ಕೂತಿರುತ್ತಾರೆ, ಅವರ ಕೆಲಸ ಪ್ರಾರಂಭವಾಗುವುದೇ ಇಲ್ಲ.
ಇಂಥಪ್ಪ ಕಚೇರಿಯಲ್ಲಿ ಹಲವಾರು ದೃಶ್ಯಗಳು ನಿತ್ಯ ನಡೆಯುತ್ತವೆ. ಕೆಲವೊಂದು ಪುನರಾವರ್ತನೆಯಾದರೆ, ಇನ್ನು ಕೆಲವು ನಿರೀಕ್ಷಿತ. ಅಪರೂಪಕ್ಕೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದುಂಟು.
ಒಳ ಬರುತ್ತಲೇ ಬೂಟಾಟಿಕೆಯ ವಾಸನೆ ಬಡಿಯುವುದಷ್ಟೇ ಅಲ್ಲ, ಕಣ್ಣೆದುರು ರಾಚಲೂತೊಡಗುತ್ತದೆ. ’ನಿನ್ನೆ ಪಾರ್ಟಿಗೆ ಹೋಗಿದ್ದೆ ಕಣೆ, ಏನ್ ಚೆನ್ನಾಗಿತ್ತು ಅಂತೀಯಾ’ ಎಂದು ಲಲನೆಯೊಬ್ಬಳು ಹೇಳುತ್ತಿದ್ದರೆ, ಅವಳ ಗೆಳತಿಯರ ಪೈಕಿ ಒಬ್ಬಿಬ್ಬರು ಮುಖವರಳಿಸಿ ಕೇಳಿಸಿಕೊಂಡರೆ, ಉಳಿದವರು ತಮ್ಮ ಕೆಲಸದಲ್ಲಿ ಬಿಜಿಯಾಗಿರುವ ನಟನೆ ಮಾಡುತ್ತಲೇ ಕಿವಿ ಅತ್ತ ತೇಲಿಬಿಟ್ಟಿರುತ್ತಾರೆ. ಇನ್ನೊಂದೆಡೆ, ಬ್ರೆಕಿಂಗ್ ನ್ಯೂಸ್ ಕೊಡುವ ಇರಾದೆಯಲ್ಲಿ ವರದಿಗಾರ ಗಂಭೀರತೆ ನಟಿಸುತ್ತ ಸರಭರ ಓಡಾಡುತ್ತಿರುತ್ತಾನೆ. ಸರಿಯಾಗಿ ಹುಡುಕಿದರೆ, ಅಂದಿನ ದಿನಪತ್ರಿಕೆಯ ಯಾವುದೋ ಒಂದೆಡೆ, ’ಬ್ರೆಕಿಂಗ್ ನ್ಯೂಸ್’ ಸುಳಿವು ಸಿಗುತ್ತದೆ.
ಎಲ್ಲರಿಗಿಂತ ತಡವಾಗಿ ಹಿರಿಯ ತಲೆಗಳು ಬರುತ್ತವೆ. ಜಗತ್ತಿನ ಭಾರವೆಲ್ಲ ತಮ್ಮ ತಲೆಯ ಮೇಲಿದೆ ಎಂಬಂತೆ ಮುಗುಳ್ನಗು ಮನೆಯಲ್ಲಿಟ್ಟು, ಗಂಭೀರವದನರಾಗಿ ಬರುತ್ತಾರೆ. ಬಂದವರೇ ಬ್ಯಾಗಿಟ್ಟು, ಕಾರಣವಿಲ್ಲದೇ ಆ ಕಡೆಯಿಂದ ಈ ಕಡೆ ಓಡಾಡುತ್ತಾರೆ. ಸುಳ್ಳು ಸುಳ್ಳೇ ಕಂಪ್ಯೂಟರ್ ಪರದೆಗಳನ್ನು ದಿಟ್ಟಿಸುತ್ತಾರೆ. ಸಹೋದ್ಯೋಗಿಗಳನ್ನು ಕರೆಯುತ್ತಾರೆ. ಅರ್ಥವಿಲ್ಲದ ವಿಷಯಗಳನ್ನು ಮಾತನಾಡಿ ಅವರಲ್ಲಿ ಗೊಂದಲ ಮೂಡಿಸುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಇನ್ನಿಲ್ಲದ ಸೀರಿಯೆಸ್‌ನೆಸ್‌ನಲ್ಲಿ ಕಂಪ್ಯೂಟರ್ ತೆರೆ ಮೇಲೆ ದೃಷ್ಟಿ ಇಟ್ಟು ಕೂತುಬಿಡುತ್ತಾರೆ.
’ಅರೆರೆ, ನೀವು ನಮ್ಮ ಬಾಸ್ ಬಗ್ಗೆ ಹೇಳುತ್ತಿಲ್ಲ ತಾನೆ?’ ಎಂದು ನಿಮಗೆ ಅನ್ನಿಸಿದರೆ, ಅಚ್ಚರಿ ಬೇಡ. ಮಿತ್ರರೇ, ಎಲ್ಲರ ಬಾಸ್‌ಗಳೂ ಸಾಮಾನ್ಯವಾಗಿ ಇರೋದೇ ಹೀಗೆ. ಎಲ್ಲೋ ಓದಿದ ವಾಕ್ಯವೊಂದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ: ನಮಗಿಂತ ದಡ್ಡರು, ತಿಕ್ಕಲರು, ಪೆದ್ದರು, ಮೂರ್ಖರು, ದುಷ್ಟರು, ಅತ್ತೆ ಮನಃಸ್ಥಿತಿಯವರು ಸಾಮಾನ್ಯವಾಗಿ ನಮ್ಮ ಸೀನಿಯರ್ ಆಗಿರುತ್ತಾರಂತೆ. ಅನುಮಾನ ಬಂದರೆ ಕೊಂಚ ಗಮನಿಸಿ ನೋಡಿ: ನಮ್ಮ ಬಹುತೇಕ ಸೀನಿಯರ್‌ಗಳು ಹೀಗೆ ತಾನೇ ಇರೋದು!
ನೀವು ಉತ್ತಮ ವಿಚಾರ ಹೇಳಿದರೆ, ಆ ಮನುಷ್ಯನಿಗೆ ಕೇಳಿಸಿಕೊಳ್ಳುವ ಸಹನೆಯೂ ಇರುವುದಿಲ್ಲ. ’ಮೊದಲು ನಾನು ಹೇಳೋದು ಕೇಳಿ’ ಎಂದೋ, ’ಅದೆಲ್ಲ ನಡೆಯೋಲ್ಲ’ ಎಂದೋ, ’ಅದನ್ನು ಮಾಡುತ್ತ ಕೂತರೆ ತಡವಾಗುತ್ತದೆ’ ಎಂದೋ ತನ್ನ ಕೆಳಮಟ್ಟದ ಐಡಿಯಾವನ್ನೇ ಹೇರಿ ಹೋಗುತ್ತಾನೆ. ಮನಸ್ಸಿಲ್ಲದಿದ್ದರೂ ನೀವು ಅದನ್ನೇ ಮಾಡಬೇಕು.
ಸಾಮಾನ್ಯವಾಗಿ, ಯಾವ ಕಚೇರಿಯಲ್ಲೂ ಹೊಸ ವಿಚಾರಗಳನ್ನು ಸ್ವಾಗತಿಸುವುದಿಲ್ಲ. ನೀವು ಬಾಸ್‌ಗಿಂತ ಜಾಣರಾಗಿದ್ದರೆ ದಯವಿಟ್ಟು ಅದನ್ನು ತೋರಿಸಿಕೊಳ್ಳಬೇಡಿ. ಬಾಸ್ ತಪ್ಪು ಮಾಡಿದ್ದರೆ, ಮಾಡುತ್ತಿದ್ದರೆ ಯಾವ ಕಾರಣಕ್ಕೂ ಬಾಯಿ ಬಿಡಬೇಡಿ. ಅದರಿಂದ ನಿಮಗೆ ಕಷ್ಟ ಕಟ್ಟಿಟ್ಟ ಬುತ್ತಿ.
ಇಂಥ ಹಲವಾರು ಘಟನೆಗಳನ್ನು ಇನ್ನು ಮುಂದೆ ವಿವರವಾಗಿ ಬರೆಯುತ್ತ ಹೋಗುತ್ತೇನೆ. ಅದಕ್ಕೂ ಮುನ್ನ ಒಂದು ಸಲಹೆ: ಸಾಧ್ಯವಾದರೆ 'ಒನ್ ನೈಟ್ ಎಟ್ ಕಾಲ್ ಸೆಂಟರ್’ ಎಂಬ ಪುಸ್ತಕ ಸಿಕ್ಕರೆ ಓದಿ. ಇಂಥ ಕಚೇರಿ, ಅಂಥ ಬಾಸ್‌ಗಳ ಬಗ್ಗೆ ಉತ್ತಮ ವಿವರಣೆ ಇದೆ ಅದರಲ್ಲಿ.
- ಚಾಮರಾಜ ಸವಡಿ
Ivane nodu annadaata
4 Apr 2008
(Deccan Herald, June 29, 2004)
(CHAMARAJ SAVADI narrates the inspiring tale of an individual who has been providing free mid-day meals to nearly 30,000 poor students in Bangalore city.)
It was lunch time when a gentleman in his forties visited a government school in J P Nagar, years ago. Several students had lined up to collect food as part of the mid-day meal scheme. Appajigowda was stunned to see what the children were eating at this school in Bangalore. While one of the little ones was having stale pulav, another child was eating stinking chutney.
For these children hailing from poor families, government schools are the only means of education, and in many cases, these meals are their only source of food too. So they are forced to eat whatever is served to them like the above said child which was eating the stale pulav despite the fact that it was served for two consecutive days. One of the children, who was more candid in admitting the truth, said that whatever her mother brings from work (as a domestic help) at houses, she brings to school.
Moved by the plight of these children at government-run schools, Appajigowda decided that something had to be done to ensure that these poor children can afford to eat at least one good meal a day. Thus began his mission in 1998 when he resigned from his job at Amco so as to dedicate himself for this noble cause.
With the amount (Rs 8 lakh) that he received from gratuity, provident fund etc, he established a trust called Akhila Karnataka Kannada Kasturi Kala Sangha.
Meanwhile, he went back to the same government school at J P Nagar and requested the staff that he intended to provide a free meal on all working days to every poor child in the school.
Thus began one of the rarest kind of services by an individual in a city like Bangalore. Today he provides one daily meal for nearly 30,000 poor children in Bangalore city. More than 101 government schools are getting his help to feed their poor students. Of them at least 12 schools are located in slums.
Although people were sarcastic initially, they gradually started appreciating his service. Help started pouring in from different quarters, and Appajigowda expanded his mid-day meals scheme to various schools. Gradually more and more schools were included into this programme. While Thyagarajnagar school became the 50th one to receive his help, Sunkenahalli school was the 75th and K N Guruswamy’s school became the 101st school in the City.
He provides food not only for primary school students but also to those studying up to Class X. In Sunkenahalli Government Primary School alone, 255 students are being fed. Although Anjanapur school is located 18 km away, it is noteworthy that food reaches there by lunchtime. To achieve this, Appajigowda has framed a foolproof schedule. There are two kitchens in J P Nagar and the third one is under construction at Sunkenahalli. Thirty workers start cooking food since morning and ten vans ferry meals to the respective schools. Teachers of these schools lend their hand in serving the food.
Appajigowda is not alone in this great endeavour, many others are also pitching in their bit by helping in whatever ways possible. The State Government, for example. has been providing 100 grams of rice and a monetary assistance of Rs 1 per child for 10,000 students.
Not satisfied, Appajigowda wants more schools to come under his mid-day meal scheme. What he feels he needs the most now is more funds and more service-oriented people. Headmasters of many schools are requesting him to extend the free mid-day meal scheme to their school too, which he is unable to do due to shortage of funds.
Those interested in helping Appajigowda can contact him at Akhila Karnataka Kannada, Kasturi Kala Sangha, No 2483, 17th Main, 25th Cross, Banashankari II Stage, Bangalore. Tel: 080-26713458. (M): 36764025.
CHAMARAJ SAVADI
Making hay while the thorn grows
(Deccan Herald, January 4, 2004)
The economic gains obtained from the thorny bushes grown in the Koppal district is one of the finest examples of making use of limited resources in the best possible way.
As the arid plain of north Karnataka is not blessed with natural water bodies, the people in the region have to make do with the available resources. Prosopus Julifera, popularly known as ‘Bellary Jaali’ or ‘Reaser Jaali’ is a variety of thorny bush that grows in areas with less rainfall and abundant sunlight. Since Koppal, Bellary, Raichur, Gulbarga and Bijapur districts of north Karnataka receive less rain, it grows in abundance in these regions and has become a great source of income for the farmers here.
The Central government came up with the idea of planting it in these regions in the 70s’. The task was executed on a war footing by sowing the seeds with the help of helicopters. Within a year, the entire region was filled with these plants, thereby improving the financial condition of the farmers.
Black earthen heaps, with smoke coming out of it is a common sight if you visit places like Sompur, Siddekoppa and Malekoppa in Koppal district. Here, these thorny bushes, which yield tons of fuel wood at low cost is converted into charcoal. The highlight of this product called ‘Sompur Charcoal’ is that it’s manufactured in an eco-friendly manner.
A bag of charcoal generally weighs 60 kg and fetches Rs 70. With regular orders from Hassan, Chennai, Vizag, Mumbai, and Bangalore, the farmers seem to have a boom time.
CHAMARAJ SAVADI
Fiasco proves goldmine for legal eagles
Even if the final solution to the Cauvery water dispute between Karnataka and Tamil Nadu is elusive, at least the legal fraternity representing Karnataka seems to have made a killing.
This has come to light in the information provided by the Government to a person under the Right to Information Act (RTI). The Government has paid a whopping Rs 22 crore to advocates in the last 17 years for arguing the case.
Founder president of Puraskar organisation, Krishna Joshi had sought information from the Karnataka Chief Secretary regarding the number of delegations and advocates and the fees and the expenses paid to them to represent Karnataka after the constitution of the Cauvery Water Disputes Tribunal.
DelayHowever, when there was a delay of more than a month to furnish the details by the officials of the RTI, Mr Joshi had filed a complaint with the Karnataka Information Commission.Two junior officers of the Water Resources department appeared before the commission on behalf of the Chief Secretary on June 21 and they were able to give answers to only two questions. The reply for one of the question was not complete. Dissatisfied with the information, the commission asked them to appear again before it on September 27 for final hearing.
Whopping fees
According to the information provided by the officials, the professional fees paid to ten advocate generals between 1990-91 to 28-2-2007 is Rs 1.34 crore. But the fees paid to the 18 advocates who argued on behalf of the State was a whopping Rs 22.10 crore. Tops the listOut of this, advocate Anil B Dhiwan tops the list with a payment of of Rs 9.66 crore . Advocate Ashok Mathur who was paid Rs 3,000 is in the bottom of the list. The fees paid to renowned advocate Fali S Nariman who has been representing the State from the beginning is just Rs 2,08,77,000. The following is the list of other advocates and the fees paid: Brijesh Kalappa (Rs 31.24 lakh), S C Sharma (Rs 25.87 lakhs), Syed Naqvi (Rs 19.60 lakhs), Y S Chitale (Rs 18.93 lakh), Atul Y Chitale (Rs 2.61 lakh), T R Andhyarujina (Rs 12.06 lakh),Deepak M Nargolkar (Rs 2.27 lakh), M Veerappa (Rs1.16 lakh), Sanjay R Hegde (Rs 12.95 lakh), Padmanabha Mahale Rs 58,70) Nanjappa Ganapathy (Rs 45,000) and Ashok Mathur (Rs 3,000). The payment to the advocates-general is as follows: A N Jayaram, (Rs 76.05 lakh), S Vijayashanker (Rs 27.03 lakh), B V Acharya (Rs 8.88 lakh), B T Parthasaraty (Rs 8.55 lakh), M R Janardhan (Rs 5.82 lakh), to P P Mutthanna (Rs 3.08 lakh) and Shivappa (Rs 2.66 lakh). The present advocate-general Uday Holla has been paid Rs 1 lakh.Bangalore visitsInformation regarding the number of visits the advocates made to Bangalore to discuss about the Cauvery issue has also been given. Advocate Mohan Katarki who has made 193 visits to Bangalore since 1990 has been paid Rs 2.75 crore. S S Javali with 158 visits was paid Rs 3.77 crore in professional fees. Shambu Prasad Singh who has made 138 visits has been paid Rs 2.41 crore since 1993. The other advocates who visited Bangalore are Anil B Dhivan (46 times), Syed B Naqvi (26), S F Nariman (19), Brijesh Kalappa (18), Ranbir Singh (14) and Sanjay R Hegde (7 times). “The amount of fees spent on the advocates so far is staggering. In spite of spending so much the government has failed to present its case properly before the tribunal, is what I feel. My whole idea is to make public every detail regarding the Cauvery issue. I will fight till I receive the full information,” said Mr Joshi.Mr Joshi who has been successful in seeing to it that the whole discussion was carried out in Kannada, also has demanded that the tribunal’s verdict should be published in Kannada and the whole issue be made public.
QUESTIONS UNANSWERED
The following questions are still awaiting answers:
*After the 1991 interim order, was the advocate-general present for five meetings out of the seven meetings called? If by chance he was absent what action has been taken?
*After the interim order, who was responsible for delaying filing the review petition by five months? What action has been taken against them?
*Has the Cauvery Water Disputes Tribunal verdict dated 5-02-2007, been published in Kannada in a summary form or is it going to be published? Why no information has been given to public in this regard?
*Out of the tribunal’s expenses 40 per cent should have been paid by Karnataka. What is the total cost?
*How many delegations have visited Delhi to sort out the Cauvery issue since 1991? What is the amount spent on these delegations?
Meanwhile, the Cauvery dispute is once again coming up before the Supreme Court in July and the State Government is preparing for the next legal battle.
Fruits of labour
This is the unusual story of an ordinary farmer Devendrappa Balutagi, who exports his pomegranates to the distant land of Germany from the arid region of Kushtagi, a small taluk town of Koppal district in North Karnataka. The bhagawa breed of pomegranate, cultivated in the taluk, is being exported to Germany now. The export is likely to bring back smiles on the faces of pomegranate growers of this region, which was notorious for its regular droughts.
It may be mentioned here that the farmers in the region had taken up pomegranate cultivation following continuous drought, which failed their regular crops like jowar, maize and some coarse millet.This miracle was possible with the use of Information Technology and the help of some good hearted officers of the state Horticulture Department.
Devendrappa Balutagi, a farmer of Kushtagi said, “This year, I have received a better yield of pomegranate. The fruits have better weight and quality. I had incurred heavy losses in the past due to lack of water. However, this time around, there is some profit. I hope to do better in the coming years.”
He has cultivated the bhagawa breed of pomegranates in an area of eight acres. The four-year-old plants have borne healthy fruits. Devendrappa is exporting the fruit to Germany through a private seed company, which earlier persuaded him to grow fruit trees instead of traditional crops. The change worked well.
It all started some eight years ago. Fed up with regular crop failures due to recurring droughts, many farmers of Kushtagi were thinking of selling their ancestral land and taking up some other profession. Then they read an article published in a Kannada newspaper which stated that regions of Koppal, Bijapur, Bagalkot and Gulbarga districts of North Karnataka can produce good quality fruits such as grapes, pomegranates, lemon, plantains, etc.
While thinking over this piece of information, a private seed company came to their aid, assuring required technical aid and possible export to foreign countries, provided the yield was of good quality.
With their help, many farmers of Kushtagi, including Devendrappa Balutagi, switched over to pomegranate, which was suitable to their land and weather condition. First two years, nothing much happened. By the third year, they started getting good yield and along with it came the first taste of success. Their pomegranates immediately attracted the markets of cities like Bangalore, Goa, Mumbai, Chennai and Hyderabad.
This enthused the private seed company to send them to foreign markets like Dubai, London, Paris and Berlin. The market responded well. With the introduction of internet and the improvement of highways, farmers of Kushtagi formed their own society, which directly communicated with foreign markets and reaped rich dividends.
In due course of time, Devendrappa Balutagi and members of his pomegranate growers' society learned how to grow good fruits, pack them well, maintain time schedules and ensure better trade relations. For this purpose, some of them even learnt the English language and the use of computers, to be able to send e-mails and maintain proper accounts.
Their modus operandi is quite simple. Leaving the sophisticated task of communicating with foreign firms to their society, most farmers concentrate on field work. They strive hard to maintain quality right from the planting stage. After the trees start bearing fruits, they are being stored in mobile storage containers in Kushtagi from where they are sent to Mumbai for exporting. The fruits reach Germany after 24 days via sea route from Mumbai.
“We are doing everything possible to ensure that the fruits remain fresh. They are generally sold within three days in Germany,” said Mr Basavaraj, the regional manager of a private seed company. Farmers get their payment through DD within 10 days of their export. Now the farmers in Kushtagi are better equipped in handling natural calamities, including uncertain monsoon. The right use of information has definitely changed their lives.
- Chamaraj Savadi