ಕ್ರಿಯೆಗೊಂದು ಪ್ರತಿಕ್ರಿಯೆ

18 Oct 2010

ಮಳೆಯಲ್ಲ,
ಕಣ್ಣೀರೂ ತೋಯಿಸುತ್ತದೆ
ನೆಲವನ್ನಷ್ಟೇ ಅಲ್ಲ,
ಮನವನ್ನೂ

ಉತ್ತರ ಕೊಡುವವರಾದರೂ ಯಾರು?
ಅವರೆಲ್ಲ ಜೋಪಾನವಾಗಿದ್ದಾರೆ
ಮನೆಯಲ್ಲಿ, ಕನಸುಗಳಲ್ಲಿ, ಹುಮ್ಮಸ್ಸಿನಲ್ಲಿ
ಬ್ಯಾಂಕ್‌ ಖಾತೆಯಲ್ಲಿ, ಲಾಕರ್‌ಗಳಲ್ಲಿ,
ಭೋರ್ಗರೆದು ಮೊರೆಯುವ ಸ್ಪೀಕರ್‌ಗಳಲ್ಲಿ

ಕನಸುಗಳಿಗೆ ದನಿ ಇರುವುದಿಲ್ಲ ಗೆಳತಿ
ಅಲ್ಲಿ ಒಮ್ಮೊಮ್ಮೆ ಬೆಳಕೂ ಇರುವುದಿಲ್ಲ
ಜಗತ್ತು ಗುರುತಿಸುವುದಾದರೂ ಹೇಗೆ?
ಗಡಚಿಕ್ಕುವ ಶಬ್ದ, ಕೋರೈಸುವ ಬೆಳಕಿನ ಅಬ್ಬರದಲ್ಲಿ
ಕನಸು ಕರಗುತ್ತದೆ,
ಕರೆ ಕೂಡ ಉಳಿಯದಂತೆ ಕಳೆದುಹೋಗುತ್ತದೆ

ಎಲ್ಲೋ ಮೌನದ ನೀರವತೆಯಲ್ಲಿ
ಕನಸು ಬಿಕ್ಕುತ್ತದೆ
ಅತ್ತವನ ಮನದಲ್ಲಿ
ಮತ್ತೆ ನೋವು ಉಕ್ಕುತ್ತದೆ

ಗಾಜಿನ ಚೌಕಟ್ಟು ಮಬ್ಬಾಗುತ್ತದೆ ನಿಜ
ಮಳೆಗಷ್ಟೇ ಅಲ್ಲ
ಕಣ್ಣೀರಿಗೂ
ಗಾಜಲ್ಲ
ಮಬ್ಬಾಗುವುದು ಕಣ್ಣು
ಅದರಾಚೆ ನಿಂತಿರುವ ಹೆಣ್ಣು

ಅದು ಕನಸೇ?
ಅಲ್ಲ
ವಾಸ್ತವ
ಅವ
ಎಂದಿಗೂ ಮುಗಿಯದ ನಿರೀಕ್ಷೆಗಳ
ಹೊತ್ತವ


- ಚಾಮರಾಜ ಸವಡಿ

5 comments:

PARAANJAPE K.N. said...

ಕನಸು ಬಿಕ್ಕುತ್ತದೆ - ನೋವು ಉಕ್ಕುತ್ತದೆ - ಕವನ ಚೆನ್ನಾಗಿದೆ

Chamaraj Savadi said...

ಥ್ಯಾಂಕ್ಸ್‌ ಪರಾಂಜಪೆಯವರೇ.

KALADAKANNADI said...

ಒ೦ದು ಕ್ಷಣ ಯೋಚಿಸುವ೦ತೆ ಮಾಡಿದ ಕವನ ಸವಡಿಯವರೇ.ತು೦ಬಾ ಅರ್ಥಗರ್ಭಿತ ಹಾಗೂ ಚಿ೦ತನಾತ್ಮಕ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Siddu Yapalaparavi said...

Manadaalda bhavane.Its good.

Chamaraj Savadi said...

ಕೆ.ಎಸ್‌. ರಾಘವೇಂದ್ರ: ಧನ್ಯವಾದ ಸರ್‌.

ಸಿದ್ದು ಯಾಪಲಪರವಿ: ಧನ್ಯವಾದ ಸರ್‌.