ಅಲ್ಲಮನ ನೆನಪಲಿ

25 Oct 2010

ಒಂದು ಕನಸಿತ್ತು
ಅವಳಂತೆ
ಒಂದು ವಾಸ್ತವ ನಿಂತಿತ್ತು
ಬದುಕಿನಂತೆ

ನಾನು ಎರಡನ್ನೂ ನೋಡಿದೆ
ಎರಡನ್ನೂ ಬೇಡಿದೆ
ಕನಸುಳಿಸು ಎಂದು ವಾಸ್ತವವ
ವಾಸ್ತವವಳಿಯಲಿ ಎಂದು ಕನಸ

ನೋಡಿದರೆ
ಕನಸೊಳು ವಾಸ್ತವ
ವಾಸ್ತವದೊಳು ಕನಸು

ಕಕ್ಕಾವಿಕ್ಕಿಯಾಗಿ
ಮನಸು ಚೀರಿತು

ಎಲಾ ಅಲ್ಲಮಾ! 


- ಚಾಮರಾಜ ಸವಡಿ

3 comments:

umesh desai said...

ಏನ್ರೀ ಇದು ಸವಡಿಯವರಿಂದ ಬಂಪರ್ ಕೊಡುಗೆ ! ಛಲೋ ಅದ

ಬಿಸಿಲ ಹನಿ said...

ತುಂಬಾ ಚಂದದ ಪದ್ಯ.ಕನಸು ಮತ್ತು ವಾಸ್ತವಗಳ ನಡುವಿನ ತಾಕಲಾಟವನ್ನು ತುಂಬಾ ಚನ್ನಾಗಿ ಬಿಂಬಿಸಿದ್ದೀರಿ. ಒಂದೊಂದು ಸಾರಿ ಕನಸೇ ವಾಸ್ತವವಾದಾಗ ವಾಸ್ತವವೇ ಕನಸಾದಾಗ ಸಂದಿಗ್ಧ ಪರಿಸ್ಥಿತಿ ಉಂಟಾಗುವದು ಸಹಜ. ಅಂಥ ಸಂದರ್ಭದಲ್ಲಿ ಅಲ್ಲಮನೂ ಕೂಡ ಸಹಾಯ ಮಾಡಲಾರನೇನೋ! ಚೆಂದದ ಕವನಕ್ಕೆ ತುಂಬ್ ಥ್ಯಾಂಕ್ಸ್!

AntharangadaMaathugalu said...

ಕನಸೋ... ವಾಸ್ತವವೋ... ಯಾವುದು ಎಲ್ಲಿ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಯಿತೇ ಮನಸೂ..? ನಂಗೇನೋ ಇದು ನಮ್ಮೊಳಗಿನ ದ್ವಂದ್ವವನ್ನು ಪ್ರತಿಪಾದಿಸಿದಂತಿದೆ. ಯಾವುದನ್ನು ಒಪ್ಪಿಕೊಳ್ಳಬೇಕೋ, ಯಾವುದನ್ನು ಬಿಡಬೇಕೋ ಎಂದು ಯಾವಾಗಲೂ ಮನಸ್ಸು ತಹತಹಿಸುವ ಭಾವ ನಿಮ್ಮ ಕವನದಲ್ಲಿ ಚೆನ್ನಾಗಿದೆ.

ಶ್ಯಾಮಲ